Kannada Duniya

ಫೆಬ್ರವರಿಯಲ್ಲಿ ತ್ರಿಗ್ರಾಹಿ ಯೋಗ ರಚನೆ; ಈ ರಾಶಿಯವರಿಗೆ ಒಳ್ಳೆಯದಾಗಲಿದೆಯಂತೆ

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗ್ರಹಗಳು ತನ್ನ ರಾಶಿ ಬದಲಾಯಿಸಿದಾಗ ಮತ್ತು ಒಂದು ಗ್ರಹ ಇನ್ನೊಂದು ಗ್ರಹದ ಜೊತೆ ಸಂಯೋಗಗೊಂಡಾಗ ಯೋಗಗಳು ರಚನೆಯಾಗುತ್ತದೆ. ಇದರಿಂದ ಕೆಲವು ರಾಶಿಚಕ್ರದಲ್ಲಿ ಜನಿಸಿದ ಜನರಿಗೆ ಶುಭವಾಗುತ್ತದೆ. ಹಾಗೇ ಕೆಲವರಿಗೆ ಅಶುಭವಾಗುತ್ತದೆಯಂತೆ. ಅದರಂತೆ ಫೆಬ್ರವರಿ 13ರಂದು ಸೂರ್ಯ ಹಾಗೂ ಫೆಬ್ರವರಿ 20ರಂದು ಬುಧ ಕುಂಭ ರಾಶಿಗೆ ಪ್ರವೇಶಿಸಲಿದೆ. ಈಗಾಗಲೇ ಕುಂಭರಾಶಿಯಲ್ಲಿ ಶನಿ ಕುಳಿತಿದ್ದು, ಇದರಿಂದ ತ್ರಿಗ್ರಾಹಿ ಯೋಗ ರಚನೆಯಾಗಲಿದ್ದು, ಇದರಿಂದ ಈ ರಾಶಿಯವರಿಗೆ ಒಳ್ಳೆಯದಾಗಲಿದೆಯಂತೆ.

ಮೇಷ ರಾಶಿ : ನೀವು ವೃತ್ತಿ ಜೀವನದಲ್ಲಿ ಏಳಿಗೆಯನ್ನು ಕಾಣುತ್ತೀರಿ. ನೀವು ವಿದೇಶದಲ್ಲಿ ಕೆಲಸ ಪಡೆಯುವ ಸಂಭವವಿರುತ್ತದೆ. ನೀವು ವ್ಯವಹಾರದಲ್ಲಿ ಸಾಕಷ್ಟು ಲಾಭವನ್ನು ಗಳಿಸುತ್ತೀರಿ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.

ವೃಷಭ ರಾಶಿ : ವಿದೇಶದಲ್ಲಿ ಆಸ್ತಿ ಖರೀದಿಸುವ ನಿಮ್ಮ ಆಸೆ ಈಡೆರಲಿದೆ. ನೀವು ಅದೃಷ್ಟದ ಬೆಂಬಲವನ್ನು ಪಡೆಯುತ್ತೀರಿ, ಇದರಿಂದ ನೀವು ಯಾವುದೇ ಕಾರ್ಯಕ್ಕೆ ಕೈಹಾಕಿದರೂ ಯಶಸ್ಸನ್ನು ಕಾಣುತ್ತೀರಿ. ನೀವು ಕಠಿಣ ಪರಿಶ್ರಮದಿಂದ ಹೆಚ್ಚು ಹಣ ಗಳಿಸುತ್ತೀರಿ.

ಮಿಥುನ ರಾಶಿ : ನೀವು ಅಪಾರ ಸಂಪತ್ತನ್ನು ಪಡೆಯುತ್ತೀರಿ. ವೃತ್ತಿ ಜೀವನದಲ್ಲಿ ಬಡ್ತಿಯನ್ನು ಪಡೆಯುತ್ತೀರಿ. ಉನ್ನತ ಉದ್ಯೋಗ ಪಡೆಯುವ ನಿಮ್ಮ ಕನಸು ನನಸಾಗಲಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...