Kannada Duniya

ಪುಷ್ಯ ಮಾಸದಲ್ಲಿ ಈ ಕೆಲಸ ಮಾಡಿದರೆ ಸಂತೋಷ ಸಮೃದ್ಧಿ ನೆಲೆಸಿರುತ್ತದೆಯಂತೆ…!

ಡಿಸೆಂಬರ್ 27ರಿಂದ ಪುಷ್ಯ ಮಾಸ ಪ್ರಾರಂಭವಾಗಿದೆ. ಹಿಂದೂಧರ್ಮದಲ್ಲಿ ಪುಷ್ಯ ಮಾಸಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಹಾಗಾಗಿ ಈ ಮಾಸದಲ್ಲಿ ನೀವು ಕೆಲವು ಕೆಲಸಗಳನ್ನು ಮಾಡುವುದರಿಂದ ಜೀವನದಲ್ಲಿ ಸುಖ, ಸಂಪತ್ತು ನೆಮ್ಮದಿಯನ್ನು ಪಡೆಯಬಹುದಂತೆ.

ಈ ಮಾಸವಿಡೀ ಸೂರ್ಯದೇವನ ಪೂಜೆ ಮಾಡಿ. ಇದರಿಂದ ನೀವು ವರ್ಷವಿಡೀ ಹಲವು ಪ್ರಯೋಜನವನ್ನು ಪಡೆಯುತ್ತೀರಿ. ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಕಾಣುತ್ತೀರಿ. ಇದರಿಂದ ಯಾವುದೇ ಗ್ರಹಗಳ ದೋಷವನ್ನು ನಿವಾರಿಸಬಹುದಂತೆ.

ಅಲ್ಲದೇ ಈ ಮಾಸದಲ್ಲಿ ಗಂಗಾಜಲದಿಂದ ಸ್ನಾನ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ. ನಿಮ್ಮ ಎಲ್ಲಾ ಪಾಪಗಳು ನಿವಾರಣೆಯಾಗುತ್ತದೆಯಂತೆ. ಅಲ್ಲದೇ ಈ ಮಾಸದಲ್ಲಿ ಅರಳೀಮರ ಮತ್ತು ಬಿಲ್ವ ಪತ್ರೆ ಮರಗಳನ್ನು ಪೂಜಿಸಿ. ಇದರಿಂದ ನಿಮಗೆ ಲಕ್ಷ್ಮೀನಾರಾಯಣರ ಮತ್ತು ಶಿವಪಾರ್ವತಿಯ ಅನುಗ್ರಹ ದೊರೆಯುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...