Kannada Duniya

ನವರಾತ್ರಿಯಲ್ಲಿ ಈ ವಸ್ತುಗಳನ್ನು ಮನೆಗೆ ತಂದರೆ ದುರ್ಗೆಯ ಕೃಪೆ ದೊರೆಯುತ್ತದೆ….!

ನವರಾತ್ರಿ ಪ್ರಾರಂಭವಾಗಿದೆ. ಈ ದಿನ ದೇವಿಯನ್ನು 9 ರೂಪದಲ್ಲಿ ಪೂಜಿಸಲಾಗುತ್ತದೆ. ಇದರಿಂದ ದೇವಿಯ ಕೃಪೆ, ಆಶೀರ್ವಾದ ದೊರೆಯುತ್ತದೆಯಂತೆ. ಹಾಗೇ ನವರಾತ್ರಿಯ ದಿನ ಈ ವಸ್ತುಗಳನ್ನು ಮನೆಗೆ ತಂದರೆ ಇದರಿಂದ ದೇವಿ ಸಂತೋಷಗೊಳ್ಳುತ್ತಾಳಂತೆ.

ನವರಾತ್ರಿಯಂದು ನವಿಲು ಗರಿಯನ್ನು ಮನೆಗೆ ತನ್ನಿ. ಇದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರಿಂದ ಮನೆಯ ವಾಸ್ತು ದೋಷ ನಿವಾರಣೆಯಾಗುತ್ತದೆ.

ನವರಾತ್ರಿಯ ದಿನ ಹಸುವಿನ ತುಪ್ಪವನ್ನು ಖರೀದಿಸಿ ಮನೆಗೆ ತನ್ನಿ. ಇದರಿಂದ ದೇವಿಯ ಆಶೀರ್ವಾದ ಸಿಗುತ್ತದೆ ಮತ್ತು ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

ನವರಾತ್ರಿಯ ಸಮಯದಲ್ಲಿ ತುಳಸಿ ಗಿಡವನ್ನು ಮನೆಗೆ ತಂದು ಅದನ್ನು ನೆಡಿ. ಇದರಿಂದ ನಿಮ್ಮ ಇಷ್ಟಾರ್ಥಗಳು ಈಡೇರುತ್ತದೆ. ಮತ್ತು ಮನೆಯಲ್ಲಿ ಸಂಭ್ರಮ ತುಂಬಿರುತ್ತದೆ.

Chanakya Niti : ಈ ಜನರನ್ನು ಎಂದಿಗೂ ಕುರುಡಾಗಿ ನಂಬಬೇಡಿ, ಕಣ್ಣು ಮಿಟುಕಿಸುವುದರೊಳಗೆ ಜೀವ ಕಳೆದುಕೊಳ್ಳಬಹುದು…!

ನವರಾತ್ರಿಯ ಸಮಯದಲ್ಲಿ ಶಂಖಪುಷ್ಪದ ಬೇರನ್ನು ಮನೆಗೆ ತನ್ನಿ. ಇದನ್ನು ಹಣವಿಡುವ ಸ್ಥಳದಲ್ಲಿ ಇಡಿ. ಇದರಿಂದ ನಿಮ್ಮ ಸಂಪತ್ತು ವೃದ್ಧಿಯಾಗುತ್ತದೆ.

ನವರಾತ್ರಿಯ ಸಮಯದಲ್ಲಿ ಮಣ್ಣಿನ ಮನೆಯನ್ನು ನಿರ್ಮಿಸಿ ಮನೆಗೆ ತಂದು ದೇವಿಯ ಪಾದದಡಿಯಲ್ಲಿಟ್ಟು ಪೂಜೆ ಮಡಿ. ಇದರಿಂದ ನಿಮ್ಮ ಮನೆಕಟ್ಟುವ ಕನಸು ನನಸಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...