Kannada Duniya

ತುಟಿಯ ಭಾಗದಲ್ಲಿರುವ ಮಚ್ಚೆ ನಿಮಗೆ ಶುಭವೇ…? ಅಶುಭವೇ…?

ಪ್ರತಿಯೊಬ್ಬ ವ್ಯಕ್ತಿಯು ದೇಹದಲ್ಲಿ ಮಚ್ಚೆಗಳನ್ನು ಹೊಂದಿರುತ್ತಾನೆ. ಈ ಮಚ್ಚೆಗಳು ಕೆಲವೊಮ್ಮೆ ನಿಮ್ಮ ಸೌಂದರ್ಯವನ್ನು ಹಾಳುಮಾಡಿದರೆ, ಕೆಲವೊಂದು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತವೆ. ಮಾತ್ರವಲ್ಲ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ಮಚ್ಚೆಗಳಿಂದ ನಿಮಗೆ ಶುಭವೇ? ಅಶುಭವೇ? ಎಂಬುದನ್ನು ತಿಳಿಯಬಹುದು.

ಮೇಲಿನ ತುಟಿಯ ಬಲಭಾಗದಲ್ಲಿ ಮಚ್ಚೆ ಇದ್ದರೆ ಇವರು ಸಂಗಾತಿಯ ವಿಷಯದಲ್ಲಿ ಅದೃಷ್ಟವಂತರಾಗಿರುತ್ತಾರಂತೆ. ಇವರಿಗೆ ತಮ್ಮ ಸಂಗಾತಿ ಸಾಕಷ್ಟು ಪ್ರೀತಿ ಮತ್ತು ಬೆಂಬಲವನ್ನು ನೀಡುತ್ತಾರಂತೆ.

ಮೇಲಿನ ತುಟಿಯ ಎಡಭಾಗದಲ್ಲಿ ಮಚ್ಚೆ ಇದ್ದರೆ ಅದು ದುರಾದೃಷ್ಟವಂತೆ. ಇವರಿಗೆ ತಮ್ಮ ಸಂಗಾತಿಯಿಂದ ಹೆಚ್ಚು ಬೆಂಬಲ, ಪ್ರೀತಿ ಸಿಗುವುದಿಲ್ಲವಂತೆ.

ಕೆಳತುಟಿಯ ಬಲಭಾಗದಲ್ಲಿ ಮಚ್ಚೆ ಇದ್ದರೆ ಇವರು ಕೆಲಸದ ಕ್ಷೇತ್ರದಲ್ಲಿ ಪರಿಪೂರ್ಣರಾಗಿರುತ್ತಾರೆ. ಇದರಿಂದ ತಮ್ಮ ಕೆಲಸದಿಂದ ಹೆಚ್ಚು ಪ್ರಸಿದ್ಧರಾಗಿರುತ್ತಾರಂತೆ.

ಹಾಗೇ ಇವರು ತಿನ್ನುವುದು ಮತ್ತು ಕುಡಿಯುವ ವಿಚಾರಕ್ಕೆ ಹೆಚ್ಚು ಗಮನಕೊಡುವುದಿಲ್ಲವಂತೆ.
ಕೆಳತುಟಿಯ ಎಡಭಾಗದಲ್ಲಿ ಮಚ್ಚೆ ಇದ್ದರೆ ಇವರಿಗೆ ಬಟ್ಟೆಯ ಬಗ್ಗೆ ಒಲವು ಇರುತ್ತದೆಯಂತೆ.

 ಅಂತಹ ಮನೆಗಳಲ್ಲಿ ಯಾವಾಗಲೂ ಹಣದ ಕೊರತೆ ಇರುತ್ತದೆ, ತಾಯಿ ಲಕ್ಷ್ಮಿ ನೆಲೆಸುವುದಿಲ್ಲ….!

ಇವರು ತಾವು ಕಾಣಲು ಚೆನ್ನಾಗಿರಬೇಕೆಂದು ಬಯಸುತ್ತಾರಂತೆ. ಅಲ್ಲದೇ ಇವರು ಗಂಭೀರ ಆರೋಗ್ಯ ಸಮಸ್ಯೆಯನ್ನು ಹೊಂದಿರುತ್ತಾರಂತೆ.

ತುಟಿಗಳ ಮೇಲೆ ಮಚ್ಚೆ ಇದ್ದರೆ ಆ ವ್ಯಕ್ತಿ ಸಾಕಷ್ಟು ಮಾತನಾಡುತ್ತಾನಂತೆ. ಹಾಗೇ ಇವರು ದುಬಾರಿ ವಸ್ತುಗಳನ್ನು ಖರೀದಿಸಲು ಮತ್ತು ಆರಾಮದಾಯಕ ಜೀವನವನ್ನು ನಡೆಸಲು ಇಷ್ಟಪಡುತ್ತಾರಂತೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...