Kannada Duniya

ಈ ವಿಗ್ರಹಗಳು ವಾಸ್ತು ದೋಷವನ್ನು ದೂರ ಮಾಡುತ್ತದೆ…!

ವಾಸ್ತು ದೋಷವಿದ್ದರೆ ಮನೆಯಲ್ಲಿ ಶಾಂತಿ, ನೆಮ್ಮದಿ ಇರುವುದಿಲ್ಲ. ಬರೀ ಸಮಸ್ಯೆಗಳೇ ಎದುರಾಗುತ್ತಿರುತ್ತವೆ. ಹಾಗಾಗಿ ಅಂತಹ ಸಂದರ್ಭದಲ್ಲಿ ಮನೆಯಲ್ಲಿ ಅಲಂಕಾರಕ್ಕೆ ಇಡುವ ಕೆಲವು ಮೂರ್ತಿಗಳು ಮನೆಯ ವಾಸ್ತು ದೋಷವನ್ನು ನಿವಾರಿಸುತ್ತವೆ. ಆ ಮೂರ್ತಿಗಳು ಯಾವುದೆಂಬುದನ್ನು ತಿಳಿದುಕೊಳ್ಳಿ.

ಈ ವಾಸ್ತು ನಿಯಮ ಪಾಲಿಸಿದರೆ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸಿರುತ್ತದೆ

ಆನೆ : ವಾಸ್ತು ಪ್ರಕಾರ ಆನೆಯ ಬೆಳ್ಳಿಯ ಮತ್ತು ಹಿತ್ತಾಳೆಯ ವಿಗ್ರಹವನ್ನು ಮನೆಯಲ್ಲಿ ಇಡುವುದು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಯಾಕೆಂದರೆ ಆನೆ ಸಮೃದ್ಧಿಯ ಸಂಕೇತವಾಗಿದೆ. ಇದನ್ನು ಮನೆಯಲ್ಲಿ ಇಡುವುದರಿಂದ ಸಕರಾತ್ಮಕ ಶಕ್ತಿ ಹೆಚ್ಚಾಗುತ್ತದೆ.

ಹಂಸ : ವಾಸ್ತು ಪ್ರಕಾರ ಜೋಡಿ ಹಂಸವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಆರ್ಥಿಕ ಲಾಭವಾಗುತ್ತದೆ. ಹಾಗಾಗಿ ಮನೆಯಲ್ಲಿ ಬಾತುಕೋಳಿ ಅಥವಾ ಹಂಸದ ಮೂರ್ತಿಯನ್ನು ಇಟ್ಟುಕೊಳ್ಳಿ.

ಆಮೆ : ಆಮೆಯನ್ನು ವಿಷ್ಣುವಿನ ಸ್ವರೂಪವೆಂದು ಕರೆಯುತ್ತಾರೆ. ಆಮೆಯ ಮೂರ್ತಿ ಇರುವ ಮನೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ. ಹಾಗಾಗಿ ಮನೆಯ ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿ ಆಮೆಯ ಪ್ರತಿಮೆಯನ್ನು ಇಡಿ.

Garuda purana,: ಗಂಡನನ್ನು ಪ್ರೀತಿಸುವ ಮಹಿಳೆಯರು ಈ ವಿಷಯಗಳಿಂದ ದೂರವಿರಬೇಕು, ಇಲ್ಲದಿದ್ದರೆ ಜೀವನ ಹಾಳಾಗಬಹುದು….!

ಗಿಳಿ : ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಉತ್ತರ ದಿಕ್ಕಿನಲ್ಲಿ ಗಿಳಿಯ ಪ್ರತಿಮೆ ಇಡುವುದರಿಂದ ಮನೆಯಲ್ಲಿ ಸುಖ, ಸಂತೋಷ ನೆಲೆಸಿರುತ್ತದೆ. ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತದೆ.

ಮೀನು : ಮನೆಯ ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿ ಹಿತ್ತಾಳೆ ಅಥವಾ ಬೆಳ್ಳಿ ಮೀನುಗಳು ಇಟ್ಟರೆ ಇದು ಸಂಪತ್ತನ್ನು ಹೆಚ್ಚಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...