Kannada Duniya

ಈ ವಸ್ತುಗಳನ್ನು ವ್ಯವಹಾರದಲ್ಲಿ ಅಭಿವೃದ್ಧಿ ಹೊಂದಲು ಕಚೇರಿಯಲ್ಲಿಡಿ….!

ಕೆಲವರು ವ್ಯವಹಾರದಲ್ಲಿ ಪ್ರಗತಿ ಕಾಣಲು ತುಂಬಾ ಕಷ್ಪಪಟ್ಟು ಕೆಲಸ ಮಾಡುತ್ತಾರೆ. ಆದರೂ ಅವರು ಏಳಿಗೆ ಕಾಣುವುದಿಲ್ಲ. ಇದರಿಂದ ಅವರು ಬೇಸರಪಡುವ ಬದಲು ಕಚೇರಿಯಲ್ಲಿ ಈ ವಸ್ತುಗಳನ್ನು ತಂದಿಡಿ. ಇದರಿಂದ ಲಕ್ಷ್ಮಿದೇವಿಯ ಅನುಗ್ರಹ ದೊರೆತು ವ್ಯವಹಾರದಲ್ಲಿ ಪ್ರಗತಿ ಕಾಣುತ್ತೀರಿ.

ನೀವು ವ್ಯವಹಾರದಲ್ಲಿ ಪ್ರಗತಿ ಕಾಣಲು ಕಚೇರಿಯಲ್ಲಿ ಬಿದಿರಿನ ಗಿಡವನ್ನು ಇಟ್ಟುಕೊಳ್ಳಿ. ಇದನ್ನು ನಿಮ್ಮ ಮೇಜಿನ ಮೇಲಿಟ್ಟರೆ ಮಂಗಳಕರ. ಇದು ವ್ಯಾಪಾರದಲ್ಲಿ ಅಭಿವೃದ್ಧಿಯನ್ನು ತರುತ್ತದೆ.
ಕಚೇರಿಯಲ್ಲಿ ಲಾಫಿಂಗ್ ಬುದ್ಧನ ಮೂರ್ತಿಯನ್ನು ಇಡಿ. ಇದು ಕಚೇರಿಯಲ್ಲಿ ಧನಾತ್ಮಕತೆಯನ್ನು ಹರಡುತ್ತದೆ. ಇದರಿಂದ ನಿಮ್ಮ ಅದೃಷ್ಟ ಹೆಚ್ಚಾಗುತ್ತದೆ.

ಲಾಲ್ ಕಿತಾಬ್ ನಲ್ಲಿ ತಿಳಿಸಿದಂತೆ, ಈ ಕೆಲಸಗಳನ್ನು ಮಾಡಿದರೆ ಗ್ರಹಗಳ ದೋಷಕ್ಕೆ ಒಳಗಾಗುತ್ತಿರಂತೆ

ಚಿನ್ನದ ನಾಣ್ಯದ ಹಡಗನನ್ನು ಕಚೇರಿಯ ಮೇಜಿನ ಮೇಲಿಡಿ. ಇದು ವ್ಯಾಪಾರವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದರಿಂದ ನಿಮಗೆ ಲಕ್ಷ್ಮಿದೇವಿಯ ಕೃಪೆ ದೊರೆಯುತ್ತದೆ.

ವ್ಯಾಪಾರದಲ್ಲಿ ಪ್ರಗತಿ ಕಾಣಲು ಆಮೆಯ ಮೂರ್ತಿಯನ್ನು ಕಚೇರಿಯಲ್ಲಿಡಿ. ಅದರಲ್ಲೂ ಒಂದು ಆಮೆಯ ಮೇಲೆ ಮತ್ತೊಂದು ಆಮೆ ಕುಳಿತಿರುವ ಅಥವಾ ನಾಣ್ಯದ ಮೇಲೆ ಕುಳಿತಿರುವ ಆಮೆಯನ್ನು ಕಚೇರಿಯ ಮೇಜಿನ ಮೇಲಿಟ್ಟರೆ ವ್ಯಾಪಾರದಲ್ಲಿ ಪ್ರಗತಿ ಕಾಣುತ್ತೀರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...