Kannada Duniya

ಆಚಾರ್ಯ ಚಾಣಕ್ಯರ ಪ್ರಕಾರ ಈ ವಿಚಾರಗಳಿಂದ ಒಬ್ಬ ವ್ಯಕ್ತಿ ಅವಮಾನವನ್ನು ಅನುಭವಿಸಬೇಕಾಗುತ್ತದೆ…!

ಆಚಾರ್ಯ ಚಾಣಕ್ಯರು ಒಬ್ಬ ಮಹಾನ್ ನೀತಿಶಾಸ್ತ್ರಜ್ಞರಾಗಿದ್ದು, ನೀತಿ ಶಾಸ್ತ್ರವನ್ನು ರಚಿಸಿದ್ದಾರೆ. ಇದರಲ್ಲಿ ಜೀವನಕ್ಕೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ಇದನ್ನು ಅನುಸರಿಸಿದ ವ್ಯಕ್ತಿ ಜೀವನದಲ್ಲಿ ಪ್ರಗತಿಯನ್ನು ಸಾಧಿಸುತ್ತಾರೆ. ಅವರು ತಿಳಿಸಿದಂತೆ ಈ 3 ವಿಚಾರಗಳಿಂದ ಒಬ್ಬ ವ್ಯಕ್ತಿ ಅವಮಾನವನ್ನು ಅನುಭವಿಸಬೇಕಾಗುತ್ತದೆ.

-ಆಚಾರ್ಯ ಚಾಣಕ್ಯರು ತಿಳಿಸಿದಂತೆ ಅಜ್ಞಾನದಿಂದ ವ್ಯಕ್ತಿ ಜೀವನದಲ್ಲಿ ಅನೇಕ ಬಾರಿ ಅವಮಾನಕ್ಕೊಳಗಾಗುತ್ತಾನೆ. ಒಬ್ಬ ವ್ಯಕ್ತಿ ಅಜ್ಞಾನಿ ಮತ್ತು ಮೂರ್ಖನಾಗಿದ್ದರೆ ಜನರು ಅವನಿಗೆ ಗೌರವವನ್ನು ನೀಡುವುದಿಲ್ಲ. ಮತ್ತು ಅವನೊಂದಿಗೆ ಮಾತನಾಡಲು ಇಷ್ಟಪಡುವುದಿಲ್ಲ.

-ಚಾಣಕ್ಯರು ತಿಳಿಸಿದಂತೆ ಕೋಪಗೊಳ್ಳುವ ವ್ಯಕ್ತಿ ಜೀವನದಲ್ಲಿ ಹೆಚ್ಚು ಅವಮಾನವನ್ನು ಅನುಭವಿಸುತ್ತಾನಂತೆ. ಹಾಗಾಗಿ ಕೋಪವು ಮನುಷ್ಯನ ದೊಡ್ಡ ಶತ್ರುವಾಗಿದೆ. ಕೋಪದಲ್ಲಿ ವ್ಯಕ್ತಿ ತಪ್ಪು ಕೆಲಸ ಮಾಡುತ್ತಾನೆ ಮತ್ತು ಅದರಿಂದ ಅವಮಾನವನ್ನು ಎದುರಿಸುತ್ತಾನೆ.

ಚಾಣಕ್ಯ ನೀತಿ: ಈ ಕಾರಣಗಳಿಂದ ವ್ಯಕ್ತಿಯು ಅವಮಾನಕ್ಕೊಳಗಾಗುತ್ತಾನೆ

-ಇತರರ ಮೇಲೆ ಅವಲಂಬಿತರಾಗುವ ವ್ಯಕ್ತಿ ತನ್ನ ಜೀವನದಲ್ಲಿ ಪ್ರತಿ ಬಾರಿ ಅವಮಾನಕ್ಕೆ ಒಳಗಾಗುತ್ತಾನೆ. ಏಕೆಂದರೆ ಅವನು ಸ್ವಂತವಾಗಿ ಏನನ್ನೂ ಮಾಡಲು ಸಾಧ್ಯವಿಲ್ಲ. ಪ್ರತಿಯೊಂದು ಕೆಲಸದಲ್ಲಿಯೂ ಇತರರ ಸಹಾಯವನ್ನು ತೆಗೆದುಕೊಳ್ಳುತ್ತಾನೆ. ಇದರಿಂದ ಆತ ಅವಮಾನಕ್ಕೊಳಗಾಗುತ್ತಾನೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...