Kannada Duniya

ಪದೇ ಪದೇ ಮೂತ್ರ ವಿರ್ಸಜನೆ ಮಾಡುವುದನ್ನು ತಡೆಯಲು ಈ ಯೋಗಾಸನ ಮಾಡಿ

ಕೆಲವರಿಗೆ ಪದೇ ಪದೇ ಮೂತ್ರ ವಿಸರ್ಜನೆ ಮಾಡಬೇಕೆನಿದಸುತ್ತದೆ. ಯಾಕೆಂದರೆ ಇವರಿಗೆ ಮೂತ್ರವನ್ನು ತಡೆಹಿಡುಯುವ ಶಕ್ತಿ ಇರುವುದಿಲ್ಲ. ಹಾಗಾಗಿ ಅಂತವರು ಈ ಯೋಗಾಸನವನ್ನು ಮಾಡಿ. ಯೋಗ ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ಹಲವಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು.

ಪರ್ವತ ಭಂಗಿ(ತಡಾಸನ): ನೀವು ನೇರವಾಗಿ ನಿಂತು ಕಾಲುಗಳನ್ನು ಒಟ್ಟಾಗಿ ಇರಿಸಿಕೊಳ್ಳಿ. ನಿಮ್ಮ ಕೈಗಳನ್ನು ನಿಮ್ಮ ದೇಹದ ಬದಿಗಳಲ್ಲಿ ಇರಿಸಿ. ನೇರವಾಗಿ ನೋಡಿ, ಆಳವಾಗಿ ಉಸಿರಾಡಿ. ಬಳಿಕ ನಿಮ್ಮ ತಲೆಯ ಮೇಲೆ ಕೈಗಳನ್ನು ಎತ್ತಿ. ನಿಮ್ಮ ದೇಹವನ್ನು ಮೇಲಕೆತ್ತಿ. ಈ ಸ್ಥಾನದಲ್ಲಿ ಕೆಲವು ಸೆಕೆಂಡುಗಳ ಕಾಲ ಇರಿ.

ಉತ್ಕಟಾಸನ : ನೀವು ನಿಂತುಕೊಂಡು ನಿಮ್ಮ ಕಾಲುಗಳು ಮತ್ತು ಸೊಂಟವನ್ನು ಅಗಲವಾಗಿಸಿ. ಅಂಗೈಗಳು ಪರಸ್ಪರ ಎದುರಾಗಿರುವಂತೆ ನಿಮ್ಮ ತೋಳುಗಳನ್ನು ಮೇಲಕ್ಕೆತ್ತಿ. ಎರಡು ಮೊಣಕಾಲುಗಳನ್ನು ಬಗ್ಗಿಸಿ ಮತ್ತು ಸಿಟ್ ಬ್ಯಾಕ್ ಸ್ಥಾನಕ್ಕೆ ಬನ್ನಿ. ಹಾಗೇ ಮಾಡುವಾಗ ನಿಮ್ಮ ಹಿಮ್ಮಡಿಯ ಮೇಲೆ ಹೆಚ್ಚಿನ ತೂಕವನ್ನು ಹಾಕಿ. ಇದನ್ನು 60ಸೆಕೆಂಡುಗಳ ಕಾಲ ಮಾಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...