Kannada Duniya

ಬಾಡಿ ಟೋನಿಂಗ್ ಗಾಗಿ ಪ್ರತಿದಿನ ಈ ಯೋಗಾಸನ ಮಾಡುತ್ತಾರಂತೆ ನಟಿ ಮಲೈಕಾ ಅರೋರಾ….!

ಫಿಟ್ ನೆಸ್ ವಿಷಯಕ್ಕೆ ಬಂದಾಗ ಬಾಲಿವುಡ್ ನಟಿ ಮಲೈಕಾ ಅರೋರಾ ಯಾವಾಗಲೂ ಅಗ್ರಸ್ಥಾನದಲ್ಲಿರುತ್ತಾರೆ. ಇವರು ತನ್ನ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫಿಟ್ ನೆಸ್ ವಿಡಿಯೋಗಳು, ಯೋಗ ಆಸನಗಳನ್ನು ನಿರಂತರವಾಗಿ ಹಂಚಿಕೊಳ್ಳುತ್ತಾರೆ. ಇದೀಗ ಅವರು ಬಾಡಿ ಟೋನಿಂಗ್ ಗಾಗಿ ಇರುವ ಅವರ ನೆಚ್ಚಿನ ಯೋಗಾಸನವನ್ನು ಹಂಚಿಕೊಂಡಿದ್ದಾರೆ.

*ವೃಕ್ಷಾಸನ: ಈ ಯೋಗ ನಿಮ್ಮ ಮನಸ್ಸು ದೇಹಕ್ಕೆ ಸಮತೋಲನವನ್ನು ತರಲು ಸಹಾಯ ಮಾಡುತ್ತದೆ. ಇದು ನಿಮ್ಮ ಕಾಲುಗಳನ್ನು ಬಲಪಡಿಸುತ್ತದೆ.
ನೆಟ್ಟಗೆ ನಿಂತುಕೊಳ್ಳಿ. ಕಾಲುಗಳ ನಡುವೆ ಒಂದು ಅಡಿ ಅಂತರವಿರಲಿ. ನಿಮ್ಮ ಎಡಗಾಲಿನ ಮೇಲೆ ದೇಹವನ್ನು ಸಮತೋಲನಗೊಳಿಸಿ ನಿಮ್ಮ ಬಲಗಾಲನ್ನು ಮೇಲಕ್ಕೆತ್ತಿ ನಿಮ್ಮ ಎಡ ತೊಡೆಯ ಒಳಭಾಗದಲ್ಲಿ ಇರಿಸಿ. ನಿಮ್ಮ ಎದೆಯ ಮಟ್ಟದಲ್ಲಿ ಪ್ರಾರ್ಥನೆ ಮಾಡುವಂತೆ ಅಂಗೈಗಳನ್ನು ಜೋಡಿಸಿ.

*ಉತ್ಕಟಾಸನ (ಕುರ್ಚಿ ಭಂಗಿ ) : ಇದು ಹಿಂಭಾಗ ಮತ್ತು ಸೊಂಟದ ಬಾಗುವಿಕೆಯನ್ನು ಬಲಪಡಿಸಲು ಈ ಆಸನ ಅತ್ಯಂತ ಸಹಾಯಕವಾಗಿದೆ. ಇದು ನಿಮ್ಮ ಹೃದಯ ಮತ್ತು ಕಿಬ್ಬೊಟ್ಟೆಯ ಅಂಗಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ನೀವು ನಿಂತುಕೊಂಡು ನಿಮ್ಮ ಕಾಲುಗಳು ಮತ್ತು ಸೊಂಟವನ್ನು ಅಗಲವಾಗಿಸಿ. ಅಂಗೈಗಳು ಪರಸ್ಪರ ಎದುರಾಗಿರುವಂತೆ ನಿಮ್ಮ ತೋಳುಗಳನ್ನು ಮೇಲಕ್ಕೆತ್ತಿ. ಎರಡು ಮೊಣಕಾಲುಗಳನ್ನು ಬಗ್ಗಿಸಿ ಮತ್ತು ಸಿಟ್ ಬ್ಯಾಕ್ ಸ್ಥಾನಕ್ಕೆ ಬನ್ನಿ. ಹಾಗೇ ಮಾಡುವಾಗ ನಿಮ್ಮ ಹಿಮ್ಮಡಿಯ ಮೇಲೆ ಹೆಚ್ಚಿನ ತೂಕವನ್ನು ಹಾಕಿ. ಇದನ್ನು 60ಸೆಕೆಂಡುಗಳ ಕಾಲ ಮಾಡಿ.

This Article gives idea what all yoga’s  malliaka-arora do to toning her body


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...