Kannada Duniya

ಈ ಗಿಡಮೂಲಿಕೆಗಳು ಲಿವರ್ ಅನ್ನು ಆರೋಗ್ಯಕರವಾಗಿಸುತ್ತದೆಯಂತೆ

ಲಿವರ್ ದೇಹದ ಪ್ರಮುಖ ಭಾಗಗಳಲ್ಲಿ ಒಂದು ದೇಹದಲ್ಲಿರುವ ವಿಷವನ್ನು ಹೊರಹಾಕುವ ಕೆಲಸ ಮಾಡುತ್ತದೆ. ಹಾಗಾಗಿ ಲಿವರ್ ನಲ್ಲಿ ಯಾವುದೇ ಸಮಸ್ಯೆಯಾದರೂ ಕೂಡ ಅದು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆಯಂತೆ. ಹಾಗಾಗಿ ಲಿವರ್ ಆರೋಗ್ಯವಾಗಿರಲು ಈ ಗಿಡಮೂಲಿಕೆಗಳನ್ನು ಬಳಸಿ.

ನೆಲ್ಲಿಕಾಯಿ: ಇದು ಲಿವರ್ ನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಲಿವರ್ ನ ಒತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆಯಂತೆ. ಮತ್ತು ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸುವಂತಹ ಕೆಲಸ ಮಾಡುತ್ತದೆ. ಇದು ಲಿವರ್ ಕಾರ್ಯವನ್ನು ಸುಧಾರಿಸುತ್ತದೆಯಂತೆ. ಹಾಗಾಗಿ ½ ಚಮಚ ನೆಲ್ಲಿಕಾಯಿ ಪುಡಿಯನ್ನು ಉಗುರು ಬೆಚ್ಚಗಿರುವ ನೀರಿನಲ್ಲಿ ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

ಭೃಂಗರಾಜ್ : ಇದು ಉತ್ತಮ ಗಿಡಮೂಲಿಕೆಯಾಗಿದ್ದು., ಇದು ಲಿವರ್ ಗೆ ಟಾನಿಕ್ ನಂತೆ ಕೆಲಸ ಮಾಡುತ್ತದೆ. ಇದು ಲಿವರ್ ನ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಕೊಬ್ಬಿದ ಲಿವರ್ ಸಮಸ್ಯೆ ಕಾಡದಂತೆ ತಡೆಯುತ್ತದೆ. ಹಾಗೇ ಪಿತ್ತರಸವನ್ನು ಸಮತೋಲನದಲ್ಲಿಡುತ್ತದೆ. ಹಾಗಾಗಿ ಇದನ್ನು ಊಟಕ್ಕೂ ಮುನ್ನ ದಿನಕ್ಕೆ 2 ಬಾರಿ ಬೆಚ್ಚಗಿರುವ ನೀರಿನಲ್ಲಿ ಬೆರೆಸಿ ಕುಡಿಯಿರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...