Kannada Duniya

ಮೊಟ್ಟೆ ಬೇಯಿಸುವಾಗ ಈ ಟಿಪ್ಸ್ ಒಮ್ಮೆ ಪ್ರಯತ್ನಿಸಿ ನೋಡಿ

ದಿನಕ್ಕೊಂದು ಮೊಟ್ಟೆ ಸೇವನೆ ಮಾಡುವುದರಿಂದ ಆರೋಗ್ಯದ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಹೆಚ್ಚಿನ ಮನೆಗಳಲ್ಲಿ ಬೆಳಗ್ಗಿನ ತಿಂಡಿಗೆ ಮೊಟ್ಟೆ ತಿನ್ನುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಅದರಲ್ಲೂ ಬೇಯಿಸಿದ ಮೊಟ್ಟೆ ಎಲ್ಲರಿಗೂ ಪ್ರಿಯ.ಬೇಯಿಸಿದ ಮೊಟ್ಟೆ ರುಚಿಯೂ ಹೆಚ್ಚು. ಅದರಲ್ಲಿ ಅಗತ್ಯ ಪೋಷಕಾಂಶಗಳೂ ಉಳಿದುಕೊಂಡಿರುತ್ತವೆ. ಹಾಗೆ ಮಾಡುವಾಗ ಅಂದರೆ ಕುದಿಯುವ ನೀರಿಗೆ ಮೊಟ್ಟೆ ಹಾಕಿದಾಕ್ಷಣ ಅದು ಒಡೆಯುತ್ತದೆ. ಅದನ್ನು ತಪ್ಪಿಸುವುದು ಹೇಗೆ?

ಎರಡು ಮೊಟ್ಟೆಯನ್ನು ಜೊತೆಯಲ್ಲೇ ಬೇಯಿಸುವಾಗ ಕುದಿಯುವ ನೀರಿನಲ್ಲಿ ಅವು ಒಂದಕ್ಕೊಂದು ಡಿಕ್ಕಿ ಹೊಡೆದು ಒಡೆದು ಹೋಗುತ್ತವೆ. ಅದನ್ನು ತಪ್ಪಿಸಲು ಬೇಯಿಸಲು ಅಗಲ ತಳದ ಪಾತ್ರೆಯನ್ನೇ ಅಯ್ದುಕೊಳ್ಳಿ.

ಕುದಿಸುವಾಗ ನೀರಿನಲ್ಲಿ ಉಪ್ಪು ಬೆರೆಸುವುದರಿಂದ ಸಿಪ್ಪೆ ತೆಗೆಯುವುದು ಸುಲಭವಾಗುತ್ತದೆ. ಫ್ರಿಜ್ ನಿಂದ ಹೊರತೆಗೆದ 15-20 ನಿಮಿಷ ಬಳಿಕವೇ ಅದನ್ನು ಬೇಯಿಸಲು ಇಡಿ. ಅದು ಸಾಮಾನ್ಯ ಉಷ್ಣತೆಗೆ ಬಂದ ಬಳಿಕವೇ ಬೇಯಿಸಿ.

ಮೊಟ್ಟೆಯನ್ನು ಬೇಯಿಸುವಾಗ ಉರಿಯೂ ಮಧ್ಯಮಗಾತ್ರದಲ್ಲಿರಲಿ. ಇದರಿಂದಲೂ ಮೊಟ್ಟೆ ಒಡೆಯುವುದನ್ನು ತಪ್ಪಿಸಬಹುದು.ಇನ್ನು ಮುಂದೆ ಮೊಟ್ಟೆ ಬೇಯಿಸಿವಾಗ ಈ ಟಿಪ್ಸ್ ಅನುಸರಿಸಿ

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...