Kannada Duniya

ಮಧುಮೇಹ ಸಮಸ್ಯೆ ಇರುವವರಿಗೆ ಈ ಇರುವವರಿಗೆ ಈ ಎಲೆಗಳು ರಾಮಬಾಣವಂತೆ…!

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಮಧುಮೇಹ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ನಮ್ಮ ಕೆಟ್ಟ ಆಹಾರ ಪದ್ಧತಿ. ಇದರಿಂದ ನಮ್ಮ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿ ಮಧುಮೇಹ ಸಮಸ್ಯೆ ಕಾಡುತ್ತದೆ. ಹಾಗಾಗಿ ಮಧುಮೇಹವನ್ನು ನಿಯಂತ್ರಿಸಲು ಆಯುರ್ವೇದದಲ್ಲಿ ತಿಳಿಸಲಾದ ಈ ಗಿಡಮೂಲಿಕೆಯನ್ನು ಬಳಸಿ.

ದೇಹದಲ್ಲಿ ಇನ್ಸುಲಿನ ಉತ್ಪಾದನೆ ಹೆಚ್ಚಾದಾಗ ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ. ಹಾಗಾಗಿ ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಕಾಕ್ಟಸ್ ಇಗ್ನಸ್(ಕಳ್ಳಿಗಿಡ)ವನ್ನು ಬಳಸಿ. ಇದರ ಬಗ್ಗೆ ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ. ಇದರಲ್ಲಿ ಪ್ರೋಟೀನ್, ಆ್ಯಂಟಿ ಆಕ್ಸಿಡೆಂಟ್ ಗಳು, ಕಬ್ಬಿಣ, ಫ್ಲೇವನಾಯ್ಡ್ ಗಳು, ಬಿ-ಕ್ಯಾರೋಟಿನ್ ಮತ್ತು ಕಾರ್ಸೋಲಿಕ್ ಆಮ್ಲದಂತಹ ಹಲವು ಪೋಷಕಾಂಶಗಳಿವೆ. ಪ್ರತಿದಿನ ಬೆಳಿಗ್ಗೆ ಇದರ ತಾಜಾ ಎಲೆಗಳನ್ನು ತೆಗೆದುಕೊಂಡು ಜಗಿದು ಸೇವಿಸಬಹುದು. ಅಥವಾ ಎಲೆಗಳನ್ನು ಒಣಗಿಸಿ ಪುಡಿಮಾಡಿ ನೀರಿನಲ್ಲಿ ಮಿಕ್ಸ್ ಮಾಡಿ ಕುಡಿಯಬಹುದು.

 ಹಾಲು ಕುಡಿದ ನಂತರವೂ ಈ ವಸ್ತುಗಳನ್ನು ತಿನ್ನಬೇಡಿ, ಈ ವಸ್ತುಗಳು ಹಾನಿಯನ್ನುಂಟುಮಾಡುತ್ತವೆ….!

ಇದು ದೇಹದಲ್ಲಿ ಸಕ್ಕರೆ ಮಟ್ವನ್ನು ನಿಯಂತ್ರಿಸುತ್ತದೆ. ಇದು ದೇಹದಲ್ಲಿ ಇನ್ಸುಲಿನಂತೆ ಕಾರ್ಯ ನಿರ್ವಹಿಸುತ್ತದೆಯಂತೆ. ಇದರಲ್ಲಿರುವ ಕೆಲವು ಕಿಣ್ವಗಳು ಗ್ಲೈಕೊಜೆನ್ ಆಗಿ ಪರಿವರ್ತಿಸಿ ಜೀವಕೋಶಗಳಿಗೆ ತಲುಪಿಸುತ್ತದೆಯಂತೆ. ಅಲ್ಲದೇ ಇದು ಶ್ವಾಸಕೋಶ, ಜೀರ್ಣಕ್ರಿಯೆ ಮತ್ತು ಕಣ‍್ಣುಗಳಿಗೂ ಪ್ರಯೋಜನಕಾರಿಯಾಗಿದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...