Kannada Duniya

ನೀವು ಆರೋಗ್ಯವಾಗಿರಲು ಆಯುರ್ವೇದದಲ್ಲಿ ತಿಳಿಸಿದ ಈ ಜೀವನಶೈಲಿಯನ್ನು ಅನುಸರಿಸಿ

ಪ್ರತಿಯೊಬ್ಬರು ತಾವು ಆರೋಗ್ಯವಾಗಿರಬೇಕೆಂದು ಬಯಸುತ್ತಾರೆ. ಆದರೆ ಅದಕ್ಕಾಗಿ ನಾವು ಸರಿಯಾದ ಜೀವನಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಅಲ್ಲದೇ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರದಲ್ಲಿ ಆಯುರ್ವೇದಕ್ಕೆ ಹೆಚ್ಚಿನ ಮಹತ್ವವಿದೆ. ಹಾಗಾಗಿ ಆಯುರ್ವೇದದಲ್ಲಿ ತಿಳಿಸಿದ ಜೀವನಶೈಲಿಯನ್ನು ಅನುಸರಿಸಿ ಆರೋಗ್ಯವಾಗಿರಿ.

ಪ್ರತಿದಿನ ಬ್ರಹ್ಮ ಮುಹೂರ್ತದಲ್ಲಿ ಏಳಲು ಪ್ರಯತ್ನಿಸಿ. ಇದು ಸಾಧ್ಯವಾಗದಿದ್ದರೆ ಸೂರ್ಯೋದಯಕ್ಕೂ ಮುನ್ನ ಎದ್ದೇಳಿ. ಆದರೆ ಹಾಸಿಗೆಯಿಂದ ತಕ್ಷಣ ಎದ್ದೇಳಬೇಡಿ, ಸ್ವಲ್ಪ ಹೊತ್ತು ಕುಳಿತು ಧ್ಯಾನ ಮಾಡಿ. ನಂತರ ಉಗುರು ಬೆಚ್ಚಗಿರುವ ನೀರಿನಿಂದ ಸ್ನಾನ ಮಾಡಿ. ಆದರೆ ಸ್ನಾನಕ್ಕೂ ಮೊದಲು ಎಣ್ಣೆ ಮಸಾಜ್ ಮಾಡಿದರೆ ದೇಹಕ್ಕೆ ಒಳ್ಳೆಯದು.

ನಂತರ ನೀವು ಸೇವಿಸುವ ಆಹಾರದಲ್ಲಿ ಆರು ರಸಗಳು ಅಂದರೆ ಉಪ್ಪು, ಸಿಹಿ, ಖಾರ, ಹುಳಿ, ಕಹಿ, ಒಗರು ಸಮಪ್ರಮಾಣದಲ್ಲಿ ಇರಲಿ. ಹಾಗೇ ಆಹಾರ ಸೇವಿಸಿದ ಅರ್ಧ ಗಂಟೆಯ ಮೊದಲು ಅಥವಾ ನಂತರ ನೀರನ್ನು ಕುಡಿಯಿರಿ. ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆಯಂತೆ. ಹಾಗೇ ರಾತ್ರಿಯ ವೇಳೆ ಸುಖಕರವಾದ ನಿದ್ರೆಯನ್ನು ಮಾಡಿ. ರಾತ್ರಿ ತಡವಾಗಿ ಮಲಗಬೇಡಿ. ಇದರಿಂದ ಆರೋಗ್ಯ ಹಾಳಾಗುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...