Kannada Duniya

ನೀವು ಅತಿಯಾಗಿ ಆಲೋಚನೆ ಮಾಡುವುದನ್ನು ತಪ್ಪಿಸಲು ಈ ಸಲಹೆ ಪಾಲಿಸಿ

ಕೆಲವರು ಒಂದು ವಿಚಾರದ ಬಗ್ಗೆ ತುಂಬಾ ಯೋಚಿಸುತ್ತಾರೆ. ಆದರೆ ಇದು ನಿಮ್ಮನ್ನು ಚಿಂತೆಗೀಡುಮಾಡುತ್ತದೆ. ಇದರಿಂದ ನಿಮ್ಮ ಮಾನಸಿಕ ಆರೋಗ್ಯ ಹದಗೆಡುತ್ತದೆ. ಇದರಿಂದ ನೀವು ಗಂಭೀರ ರೋಗಗಳಿಗೆ ಬಲಿಯಾಗುತ್ತೀರಿ. ಹಾಗಾಗಿ ನೀವು ಅತಿಯಾಗಿ ಆಲೋಚನೆ ಮಾಡುವುದನ್ನು ತಪ್ಪಿಸಲು ಈ ಸಲಹೆ ಪಾಲಿಸಿ.

ಅತಿಯಾಗಿ ಯೋಚನೆ ಮಾಡುವುದರಿಂದ ರಕ್ತದೊತ್ತಡ ಹೆಚ್ಚಾಗಬಹುದು. ಇದು ಪಾರ್ಶ್ವವಾಯು, ಹೃದಯಾಘಾತಕ್ಕೆ ಕಾರಣವಾಗಬಹುದು. ಅಲ್ಲದೇ ಅತಿಯಾಗಿ ಆಲೋಚನೆ ಮಾಡುತ್ತಾ ವ್ಯಕ್ತಿ ಆಲ್ಕೋಹಾಲ್ ಸೇವನೆ, ಧೂಮಪಾನದಂತಹ ಕೆಟ್ಟ ಚಟಗಳಿಗೆ ಬಲಿಯಾಗುತ್ತಾರೆ. ಹಾಗಾಗಿ ಅತಿಯಾಗಿ ಯೋಚಿಸುವುದನ್ನು ನಿಯಂತ್ರಿಸುವುದು ಅವಶ್ಯಕ.

ಅದಕ್ಕಾಗಿ ನೀವು ಯಾವಾಗಲೂ ಕಾರ್ಯಗಳಲ್ಲಿ ನಿರತರಾಗಿರಿ. ನಿಮಗೆ ಸಂತೋಷ ನೀಡುವಂತಹ ವಿಷಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ನಕರಾತ್ಮಕ ಭಾವನೆಗಳನ್ನುಂಟುಮಾಡುವಂತಹ ಜನರಿಂದ ದೂರವಿರಿ. ನಿಮ್ಮನ್ನು ಬೆಂಬಲಿಸುವಂತಹ ಮತ್ತು ನಿಮಗೆ ಸಂತೋಷ ನೀಡುವಂತಹ ಜನರೊಂದಿಗೆ ಬೆರೆಯಿರಿ. ನಿಮ್ಮ ಮನಸ್ಸನ್ನು ಶಾಂತಗೊಳಿಸಲು ಧ್ಯಾನಗಳನ್ನು ಮಾಡಿರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...