Kannada Duniya

ನೀರು ರಾತ್ರಿಯ ವೇಳೆ ಕುಡಿಯುವುದು ಆರೋಗ್ಯಕ್ಕೆ ಉತ್ತಮವೇ…?

ದೇಹಕ್ಕೆ ನೀರು ಅತ್ಯಗತ್ಯ. ಹಾಗಾಗಿ ಸಾಕಷ್ಟು ನೀರನ್ನು ಕುಡಿಯಬೇಕು. ಇಲ್ಲವಾದರೆ ದೇಹ ನಿರ್ಜಲೀಕರಣಗೊಂಡು ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಆರೋಗ್ಯವಂತ ಮನುಷ್ಯ ದಿನಕ್ಕೆ 3-4 ಲೀಟರ್ ನೀರನ್ನು ಕುಡಿಯಬೇಕು. ಆದರೆ ರಾತ್ರಿ ನೀರನ್ನು ಕುಡಿದರೆ ಆರೋಗ್ಯಕ್ಕೆ ಉತ್ತಮವೇ ? ಇದಕ್ಕೆ ಉತ್ತರ ಇಲ್ಲಿದೆ.

ರಾತ್ರಿ ಮಲಗುವ ಮುನ್ನ ನೀರು ಕುಡಿಯುವುದು ಉತ್ತಮ ಎಂದು ತಜ್ಞರು ತಿಳಿಸಿದ್ದಾರೆ. ಇದು ಆಹಾರ ಜೀರ್ಣವಾಗಲು ಸಹಾಯ ಮಾಡುತ್ತದೆ. ಚಯಾಪಚಯ ಕ್ರಿಯೆ ಉತ್ತಮವಾಗಿರುತ್ತದೆ. ಹಾಗೇ ದೇಹಕ್ಕೆ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯವಾಗುತ್ತದೆ ಮತ್ತು ತ್ಯಾಜ್ಯ ಉತ್ಪನ್ನಗಳನ್ನು ಹೊರಹಾಕಲು ಸಹಕರಿಸುತ್ತದೆ. ಹಾಗೇ ಆ್ಯಸಿಡಿಟಿ ಸಮಸ್ಯೆ ಕಾಡುವುದಿಲ್ಲ.

Aloe Vera for Diabetes: ಅಲೋವೆರಾ ಅನ್ನು ಈ ರೀತಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ…!

ಆದರೆ ಮಧುಮೇಹಿಗಳು ಮತ್ತು ಹೃದ್ರೋಗ ಸಮಸ್ಯೆ ಇರುವವರು ಮಾತ್ರ ಹೆಚ್ಚು ನೀರು ಕುಡಿಯುವುದನ್ನು ತಪ್ಪಿಸಿ. ಯಾಕೆಂದರೆ ಇವರಲ್ಲಿ ಮೂತ್ರ ವಿಸರ್ಜನೆ ಹೆಚ್ಚಾಗಿರುತ್ತದೆ. ಹಾಗಾಗಿ ಇವರು ರಾತ್ರಿ ನೀರು ಹೆಚ್ಚು ಕುಡಿದರೆ ಪದೇ ಪದೇ ಮೂತ್ರ ವಿಸರ್ಜನೆ ಮಾಡಬೇಕಾಗುತ್ತದೆ. ಇದರಿಂದ ಅವರ ನಿದ್ರೆ ಕೆಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...