Kannada Duniya

ತೂಕವನ್ನು ತ್ವರಿತವಾಗಿ ಇಳಿಸಲು ತಜ್ಞರು ತಿಳಿಸಿದ ಈ ಮೂರು ಸಲಹೆ ಪಾಲಿಸಿ…!

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಕೆಟ್ಟ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ತೂಕ ಹೆಚ್ಚಳ ಸಮಸ್ಯೆಗೆ ಒಳಗಾಗುತ್ತಿದ್ದರೆ. ಇದರಿಂದ ಅವರಲ್ಲಿ ಮಧುಮೇಹ, ಹೃದ್ರೋಗ, ರಕ್ತದೊತ್ತಡ ಸಮಸ್ಯೆ ಕಾಡುತ್ತದೆ. ಹಾಗಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳವುದು ಅಗತ್ಯ. ಅದಕ್ಕಾಗಿ ನೀವು ತಜ್ಞರು ತಿಳಿಸಿದ ಈ ಮೂರು ಸಲಹೆಗಳನ್ನು ಪಾಲಿಸಿ.

ನೀವು ತ್ವರಿತವಾಗಿ ತೂಕ ಇಳಿಸಲು ಬಯಸಿದರೆ ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಗಳ ಸೇವನೆಯನ್ನು ಕಡಿಮೆ ಮಾಡಿ. ಹಾಗೇ ಸಕ್ಕರೆ ಮತ್ತು ಪಿಷ್ಟದ ಆಹಾರಗಳನ್ನು ಸೇವಿಸಬೇಡಿ. ಅದರ ಬದಲು ಧಾನ್ಯಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ. ಇದರಲ್ಲಿ ಕಡಿಮೆ ಕ್ಯಾಲೋರಿ ಇದ್ದು, ಇದರಿಂದ ಹಸಿವು ಕಡಿಮೆಯಾಗುತ್ತದೆ.

ನಿಮ್ಮ ಊಟದಲ್ಲಿ ಪ್ರೋಟೀನ್ ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇರಿಸಿಕೊಳ್ಳಿ. ಪ್ರೋಟೀನ್ ಗಾಗಿ ಮೀನು, ಮಾಂಸ, ಮೊಟ್ಟೆ, ಮುಂತಾದವುಗಳನ್ನು ಸೇವಿಸಿ. ಹಾಗೇ ಸೊಪ್ಪುಗಳು, ಕೋಸುಗಡ್ಡೆ, ಹೂಕೋಸು, ಸೌತೆಕಾಯಿ ಮುಂತಾದ ತರಕಾರಿಗಳನ್ನು ಸೇವಿಸಿ.

ಸಂಜೆ ಮೇಲೆ ಹಣ್ಣುಗಳನ್ನು ತಿನ್ನಬಾರದಂತೆ, ಯಾಕೆ ಗೊತ್ತಾ…?

ಹಾಗೇ ನಿಯಮಿತವಾಗಿ ವ್ಯಾಯಾಮ ಮಾಡಿ. ಇದು ವೇಗವಾಗಿ ತೂಕವನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೂ ಹೆಚ್ಚಿನ ಕ್ಯಾಲೋರಿಗಳ್ನು ಸುಡುತ್ತದೆ. ನಿಮ್ಮ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಹಾಗಾಗಿ ವಾಕಿಂಗ್, ರನ್ನಿಂಗ್, ಸೈಕ್ಲಿಂಗ್, ಈಜು ಮುಂತಾದವುಗಳನ್ನು ಮಾಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...