Kannada Duniya

ತೂಕವನ್ನು ಕಡಿಮೆ ಮಾಡಿಕೊಳ್ಳಿ ಈ ಹೂವನ್ನು ಬಳಸಿ….!

ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಳ ದೊಡ್ಡ ಸಮಸ್ಯೆಯಾಗಿದೆ. ಹಾಗಾಗಿ ಹೆಚ್ಚಿನವರು ತೂಕವನ್ನು ನಿಯಂತ್ರಿಸಲು ಕಷ್ಟಪಡುತ್ತಾರೆ. ಯಾಕೆಂದರೆ ತೂಕ ಹೆಚ್ಚಳ ಅವರ ದೇಹದ ಸೌಂದರ್ಯವನ್ನು ಕೆಡಿಸುತ್ತದೆ. ಹಾಗಾಗಿ ನಿಮ್ಮ ತೂಕವನ್ನು ಕಡಿಮೆ ಮಾಡಲು ಬೇವಿನ ಹೂವನ್ನು ಹೀಗೆ ಬಳಸಿ.

ಬೇವಿನ ಹೂವು ತೂಕ ಕಡಿಮೆ ಮಾಡಲು ಸಹಕಾರಿಯಾಗಿದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಮತ್ತು ಕ್ಯಾಲೋರಿಗಳನ್ನು ವೇಗವಾಗಿ ಕರಗಿಸುತ್ತದೆ.

ಹಾಗಾಗಿ ಬೇವಿನ ಹೂಗಳನ್ನು ಪೇಸ್ಟ್ ಮಾಡಿ ಅದಕ್ಕೆ 1 ಚಮಚ ಜೇನುತುಪ್ಪ ಮತ್ತು ನಿಂಬೆ ರಸವನ್ನು ಮಿಕ್ಸ್ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದರಿಂದ ಚಯಾಪಚಯ ಕ್ರಿಯೆ ವೇಗವಾಗಿ ಕೊಬ್ಬು ಕರಗುತ್ತದೆ.

ಕುಂಬಳಕಾಯಿ ಬೀಜ ಒತ್ತಡವನ್ನು ನಿವಾರಿಸುತ್ತದೆಯೇ…?

ಹಾಗೇ ತಾಜಾ ಬೇವಿನ ಹೂಗಳನ್ನು 1 ಕಪ್ ನೀರಿನಲ್ಲಿ ಕುದಿಸಿ ಅದಕ್ಕೆ ಸ್ವಲ್ಪ ಶುಂಠಿ ರಸವನ್ನು ಬೆರೆಸಿ ಕುಡಿಯಿರಿ. ದಿನದಲ್ಲಿ 1 ಕಪ್ ಕುಡಿಯಿರಿ. ಇದರಿಂದ ನಿಮ್ಮ ತೂಕ ಕಡಿಮೆಯಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...