Kannada Duniya

ಅತಿಯಾಗಿ ಯೋಚಿಸುವುದನ್ನು ತಪ್ಪಿಸಲು ಈ ಮುದ್ರೆಗಳನ್ನು ಮಾಡಿ….!

ಕೆಲವರು ಅಗತ್ಯಕ್ಕಿಂತ ಹೆಚ್ಚು ಯೋಚನೆ ಮಾಡುತ್ತಾರೆ. ಇದು ಅವರ ಮೆದುಳಿನ ಮೇಲೆ ಪರಿಣಾಮವನ್ನು ಬೀರುತ್ತದೆ. ಇದರಿಂದ ನಿಮ್ಮ ಮನಸ್ಥಿತಿ ಹಾಳಾಗುತ್ತದೆ. ಹಾಗಾಗಿ ನೀವು ಅತಿಯಾಗಿ ಯೋಚಿಸುವುದನ್ನು ತಪ್ಪಿಸಲು ಈ ಮುದ್ರೆಗಳನ್ನು ಅಭ್ಯಾಸ ಮಾಡಿ.

ಜ್ಞಾನ ಮುದ್ರೆ : ಈ ಮುದ್ರೆ ಅತಿಯಾಗಿ ಯೋಚಿಸುವ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ಸ್ಮರಣೆ ಮತ್ತು ಗಮನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಭಂಗಿಯನ್ನು ಮಾಡುವಾಗ ನಿಮ್ಮ ಬೆನ್ನನ್ನು ನೇರವಾಗಿಟ್ಟುಕೊಳ್ಳಿ. ನಂತರ ತೋರು ಬೆರಳನ್ನು ಹೆಬ್ಬೆರಳಿನಿಂದ ಸಂಪರ್ಕಿಸಿ ನಿಮ್ಮ ಉಸಿರಾಟದ ಮೇಲೆ ಗಮನ ಹರಿಸಿ.

Sleep Deprived: ವಿದುರ ನೀತಿ; ಈ ಬಗ್ಗೆ ವಿಚಾರ ಮಾಡುವ ವ್ಯಕ್ತಿ ನಿದ್ರಿಸುವ ಸುಖವನ್ನು ಕಳೆದುಕೊಳ್ಳುತ್ತಾನೆ…!

ವಾಯು ಮುದ್ರೆ : ನಿಮ್ಮ ಅತಿಯಾದ ಆಲೋಚನೆಯಿಂದ ಉಂಟಾಗುವ ಒತ್ತಡವನ್ನು ನಿವಾರಿಸಲು ಈ ಮುದ್ರೆ ಸಹಕಾರಿಯಾಗಿದೆ. ಇದು ಹಾರ್ಮೋನ್ ಅನ್ನು ಸಮತೋಲನದಲ್ಲಿಡುತ್ತದೆ. ಈ ಮುದ್ರೆಯನ್ನು ಮಾಡಲು ನಿಮ್ಮ ತೋರುಬೆರಳನ್ನು ಮಡಚಿ ಅದನ್ನು ನಿಮ್ಮ ಹೆಬ್ಬೆರಳಿನ ಮೇಲೆ ಇರಿಸಿ. ಇದನ್ನು ಪ್ರತಿದಿನ ಬೆಳಿಗ್ಗೆ 20 ನಿಮಿಷಗಳ ಕಾಲ ಮಾಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...