Kannada Duniya

ಹಾಲು ಕುದಿಸುವ ಸರಿಯಾದ ವಿಧಾನ ತಿಳಿದುಕೊಳ್ಳಿ

ಹಾಲನ್ನು ಸಂಪೂರ್ಣ ಆಹಾರವೆಂದು ಕರೆಯುತ್ತಾರೆ. ಯಾಕೆಂದರೆ ಇದರಲ್ಲಿ ಎಲ್ಲಾ ಪೋಷಕಾಂಶಗಳು ಸಮೃದ್ಧವಾಗಿದೆ. ಇದು ದೇಹಕ್ಕೆ ಬೇಕಾದ ಪೋಷಕಾಂಶವನ್ನು ಒದಗಿಸುತ್ತದೆ. ಆದರೆ ಹಾಲನ್ನು ಕುದಿಸಿ ಕುಡಿಯಬೇಕು. ಹಾಲನ್ನು ಕುದಿಸಲು ಸರಿಯಾದ ವಿಧಾನ ತಿಳಿದುಕೊಳ್ಳಿ. ಇಲ್ಲವಾದರೆ ಇದರಿಂದ ಆರೋಗ್ಯಕ್ಕೆ ಹಾನಿಯಾಗಬಹುದು.

ಹಸಿ ಹಾಲನ್ನು ಕುಡಿಯಬಾರದು. ಯಾಕೆಂದರೆ ಇದರಲ್ಲಿ ಬ್ಯಾಕ್ಟೀರಿಯಾಗಳಿದ್ದು ಅದು ನಮ್ಮ ದೇಹದಲ್ಲಿ ಸಮಸ್ಯೆಯನ್ನು ಉಂಟುಮಾಡುತ್ತದೆ. ಹಾಗಾಗಿ ಹಾಲನ್ನು ಕುದಿಸಿ ಕುಡಿಯಬೇಕು. ಆದರೆ ಹಾಲನ್ನು 10 ನಿಮಿಷಗಳಿಗಿಂತ ಹೆಚ್ಚು ಕಾಲ ಕುದಿಸಬಾರದು. ಇದರಿಂದ ಹಾಲಿನಲ್ಲಿ ಪೋಷಕಾಂಶ ಹಾಗೇ ಉಳಿದುಕೊಳ್ಳುತ್ತದೆ.

ಹಾಗೇ ಹಸಿ ಹಾಲನ್ನು ಕುದಿಸುವ ಮುನ್ನ ಅದಕ್ಕೆ ನೀರನ್ನು ಬೆರೆಸಿಕೊಳ್ಳಬೇಕು. ಇದರಿಂದ ಹಾಲಿನ ಪೋಷಕಾಂಶಗಳ ನಾಶವಾಗುವುದಿಲ್ಲ. ಮತ್ತು  ಹಾಲನ್ನು ಮತ್ತೆ ಮತ್ತೆ ಕುದಿಸಬಾರದು. ಹಾಗೇ ಹಾಲನ್ನು ಬಿಸಿ ಮಾಡಲು ಮೈಕ್ರೋವೇವ್ ಓವನ್ ಬಳಸಬೇಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...