Kannada Duniya

ಈ ಕುರ್ತಾಗಳಿಗೆ ದುಪ್ಪಟ ಧರಿಸಬೇಕಾಗಿಲ್ಲ….!

ಕುರ್ತಾ ಹೆಚ್ಚು ಕಂಫರ್ಟ್ ಆದ ಉಡುಪು ಆಗಿರುವುದರಿಂದ ಹೆಚ್ಚಿನವರು ಅದನ್ನೇ ಧರಿಸುತ್ತಾರೆ.. ಕೆಲವರಿಗೆ ಕುರ್ತಾದ ಮೇಲೆ ದುಪ್ಪಟಾ ಧರಿಸುವ ಹವ್ಯಾಸವಿರುತ್ತದೆ. ಕೆಲವೊಂದು ಕುರ್ತಾಗಳಿಗೆ ದುಪ್ಪಟಾ ಧರಿಸಲೇಬೇಕಾಗುತ್ತದೆ. ಆದರೆ ಕೆಲವೊಂದು ಕುರ್ತಾಗಳಿಗೆ ದುಪ್ಪಟಾ ಧರಿಸುವ ಅವಶ್ಯಕತೆ ಇರುವುದಿಲ್ಲ.. ಅಂತಹ ಕುರ್ತಾಗಳು ಯಾವುದೆಂಬುದನ್ನು ತಿಳಿಯೋಣ.

*ಅಂಗಾರ್ಕಾ ಶೈಲಿ ಕುರ್ತಾ(Angarka kurtha) : ಈ ಕುರ್ತಾಕ್ಕೆ ದುಪ್ಪಟ್ಟ ಧರಿಸುವ ಅವಶ್ಯಕತೆ ಇಲ್ಲ. ಇವು ಬೇಸಿಗೆಯಲ್ಲಿ ತುಂಬಾ ಆರಾಮದಾಯಕವಾಗಿದೆ.

*ಕೋಟ್ ಶೈಲಿ ಕುರ್ತಾ(coat kurtha) : ಇದನ್ನು ಆಫೀಸ್ ಹಾಗೂ ಪಾರ್ಟಿಗಳಿಗೆ ಧರಿಸಬಹುದು. ಇದಕ್ಕೆ ಕಿವಿಯೋಲೆ, ಅಲಂಕಾರಿಕ ಪಾದರಕ್ಷೆ ಧರಿಸಿದರೆ ವಿಶೇಷವಾದ ನೋಟವನ್ನು ನೀಡುತ್ತದೆ.

*ಜಾಕೆಟ್ ಕುರ್ತಾ(Jacket Kurtha) : ಇದು ಇತ್ತೀಚೆಗೆ ಜನಪ್ರಿಯವಾಗಿದೆ. ಇದರಲ್ಲಿ ಉದ್ದವಾದ ಜಾಕೆಟ್, ಮಧ್ಯಮ ಜಾಕೆಟ್, ಸಣ್ಣ ಜಾಕೆಟ್ ಗಳಂತಹ ಹಲವು ರೀತಿಯ ಜಾಕೆಟ್ ಕುರ್ತಾಗಳಿವೆ.

ದೇಹದಲ್ಲಿ ನೀರಿನ ಕೊರತೆಯಾದರೆ ದೇಹದಲ್ಲಿ ಈ ಲಕ್ಷಣಗಳು ಕಂಡುಬರುತ್ತವೆಯಂತೆ

*ಕೇಪ್ ಸ್ಟೈಲ್ ಕುರ್ತಾ(cape style Kurtha) : ಇದು ಕೂಡ ಸಾಕಷ್ಟು ಜನಪ್ರಿಯವಾದ ಕುರ್ತಾ. ಇದಕ್ಕೆ ದುಪ್ಪಟಾ ಧರಿಸುವ ಅವಶ್ಯಕತೆ ಇಲ್ಲ. ಇದರಲ್ಲಿ ಹೆಗಲ ಮೇಲೆ ದುಪ್ಪಟಾ ಅಂಟಿಕೊಂಡಿರುತ್ತದೆ.

*ಲಾಂಗ್ ಸ್ಲಿಟ್ ಕುರ್ತಾ( long slit kurtha) :  ಇದನ್ನು ಜೀನ್ಸ್ ಮೇಲೆ ಧರಿಸಿದರೆ ಮಾತ್ರ ಇದರ ನೋಟ ಸೊಗಸಾಗಿರುತ್ತದೆ. ಇದರಲ್ಲಿ ಮುಂಭಾಗದಲ್ಲಿ ಸೀಳು ತುಂಬಾ ದೊಡ್ಡದಾಗಿರುತ್ತದೆ. ಇದಕ್ಕೆ ದುಪ್ಪಟಾ ಧರಿಸಬಾರದು.

Modern kurtas come in different styles and some of them dont need a duppatta to style them.Learn which kurtas can be styled in what way.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...