Kannada Duniya

ಯಾವ ಬಣ್ಣದ ಬಟ್ಟೆಯ ಜೊತೆ ಯಾವ ಬಣ್ಣದ ಐಶ್ಯಾಡೋ ಬಳಸಿದರೆ ಉತ್ತಮವಾಗಿ ಕಾಣುತ್ತದೆ ಎಂಬುದನ್ನು ತಿಳಿಯಿರಿ….!

ಕಣ್ಣಿನ ಸೌಂದರ್ಯವನ್ನು ಹೆಚ್ಚಿಸಲು ಐಶ್ಯಾಡೋವನ್ನು ಬಳಸುತ್ತಾರೆ. ಹಲವು ಬಾರಿ ಡ್ರೆಸ್ ಕಲರ್ ಗೆ ಮ್ಯಾಚ್ ಮಾಡಿ ಐಶ್ಯಾಡೋ ಹಾಕುತ್ತಾರೆ. ಆದರೆ ಇದರಿಂದ ಕೆಲವೊಮ್ಮೆ ನಿಮ್ಮ ಲುಕ್ ಕೆಡುತ್ತದೆ. ಹಾಗಾಗಿ ಐಶ್ಯಾಡೋ ಹಚ್ಚುವಾಗ ಯಾವ ಬಣ್ಣದ ಬಟ್ಟೆಯ ಜೊತೆ ಯಾವ ಬಣ್ಣದ ಐಶ್ಯಾಡೋ ಬಳಸಿದರೆ ಉತ್ತಮವಾಗಿ ಕಾಣುತ್ತದೆ ಎಂಬುದನ್ನು ತಿಳಿಯಿರಿ.

ಕಪ್ಪು ಬಣ್ಣ : ನೀವು ಪಾರ್ಟಿಗೆ ಹೋಗಲು ಬಯಸಿದ್ದರೆ ಕಪ್ಪು ಬಣ್ಣದ ಬಟ್ಟೆ ಧರಿಸಿ. ಇದು ಎಲ್ಲಾ ಕಡೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ ಮತ್ತು ಸೊಗಸಾದ ನೋಟವನ್ನು ನೀಡುತ್ತದೆ. ಹಾಗಾಗಿ ನೀವು ಕಪ್ಪು ಬಣ್ಣದ ಬಟ್ಟೆಗೆ ಸಿಲ್ವರ್ ಐಶ್ಯಾಡೋ ಬಳಸಬಹುದು.

ಕಿತ್ತಳೆ ಬಣ್ಣ : ಈ ಬಣ್ಣದ ಬಟ್ಟೆ ಧರಿಸಿದರೆ ಅದಕ್ಕೆ ಕಂದು, ಕಾಪ್, ಪೀಚ್ ನೇರಳೆ ಬಣ್ಣವನ್ನು ಹಚ್ಚಿದರೆ ನಿಮ್ಮ ಕಣ್ಣುಗಳು ಆಕರ್ಷಕವಾಗಿ ಕಾಣುತ್ತದೆ.

ಫಿಟ್ ಆಗಿ ಆರೋಗ್ಯವಾಗಿರಲು ಮಹಿಳೆಯರು ಈ ಆಹಾರ ಸೇವಿಸಿ….!

ನೇರಳೆ ಬಣ್ಣ : ನೀವು ನೇರಳೆ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಗೋಲ್ಡನ್ ಬಣ್ಣದ ಐಶ್ಯಾಡೋ ಹಚ್ಚಿ. ಇದು ಅದ್ಭುತವಾಗಿ ಕಾಣುತ್ತದೆ. ನೀವು ಹಗಲಿನಲ್ಲಿ ನೇರಳೆ ಬಣ್ಣದ ಉಡುಪನ್ನು ಧರಿಸುತ್ತಿದ್ದರೆ ತಿಳಿ ನೇರಳೆ, ಕಪ್ಪು ಬಣ್ಣಇದ ಐಶ್ಯಾಡೋ ವನ್ನು ಹಚ್ಚಿ.

ಕೆಂಪು ಬಣ್ಣ : ಕೆಂಪು ಬಣ್ಣದ ಡ್ರೆಸ್ ನಲ್ಲಿ ಹಲವರು ಸುಂದರವಾಗಿ ಕಾಣುತ್ತಾರೆ. ಇದರೊಂದಿಗೆ ನೀವು ಕಪ್ಪು ಬಣ್ಣದ ಐಶ್ಯಾಡೋವನ್ನು ಹಚ್ಚಬಹುದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...