Kannada Duniya

ಗಡ್ಡ ಬೆಳೆಸುವುದು ಒಳ್ಳೆಯದೇ….?

ಗಡ್ಡ ಬೆಳೆಸುವುದು ಈಗ ಕೇವಲ ಸ್ಟೈಲ್ ಮಾತ್ರ ಆಗಿ ಉಳಿದಿಲ್ಲ. ಉದ್ದನೆಯ ಗಡ್ಡ ಇಳಿಬಿಡುವುದರಿಂದ ಹಲವು ಆರೋಗ್ಯದ ಪ್ರಯೋಜನಗಳೂ ಇವೆ. ಅವ್ಯಾವುವು ಎಂದಿರಾ?

-ಇವು ಬೇಸಿಗೆಯಲ್ಲಿ ಸೂರ್ಯನ ನೇರ ಕಿರಣಗಳು ಮುಖದ ಮೇಲೆ ಬೀಳುವುದನ್ನು ತಪ್ಪಿಸುತ್ತದೆ. ತ್ವಚೆ ಸನ್ ಬರ್ನ್ ಆಗುವುದನ್ನು ಮಾತ್ರವಲ್ಲ ಟ್ಯಾನ್ ಗಳಿಂದಲೂ ನಿಮ್ಮ ತ್ವಚೆಯನ್ನು ರಕ್ಷಿಸಬಹುದು.

-ಧೂಳು ಮತ್ತಿತರ ಕೊಳೆಗಳು ನಿಮ್ಮ ತ್ವಚೆಯನ್ನು ಅಂಟಿಕೊಳ್ಳುವುದನ್ನು ತಪ್ಪಿಸುತ್ತದೆ. ತ್ವಚೆಯ ರಕ್ಷಣೆಗೆ ಪರದೆಯಂತೆ ಇದು ಕೆಲಸ ಮಾಡುತ್ತದೆ. ಆದರೆ ಗಡ್ಡದ ನೈರ್ಮಲ್ಯವನ್ನು ರಕ್ಷಿಸಿಕೊಳ್ಳುತ್ತಿರುವುದು ಅಷ್ಟೇ ಮುಖ್ಯ. ಗಡ್ಡದ ಶ್ಯಾಂಪೂ, ಕ್ರೀಮ್ ಗಳನ್ನು ಬಳಸಿ ಅದರ ಆಕರ್ಷಣೆ ಹೆಚ್ಚಿಸಿಕೊಳ್ಳಬಹುದು.

-ಮೊಡವೆಗಳ ಸಮಸ್ಯೆಯಿಂದ ಮುಕ್ತಿ ನೀಡಿ ನಿಮ್ಮ ತ್ವಚೆಯಲ್ಲಿ ತೇವಾಂಶವನ್ನು ಕಾಪಾಡುತ್ತದೆ. ಅದಕ್ಕೂ ಮುನ್ನ ಗಡ್ಡವನ್ನು ಆಗಾಗ ಕತ್ತರಿಸುತ್ತಿರುವುದು ಬಹಳ ಮುಖ್ಯ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...