Kannada Duniya

Largest Hindu Temple: ವಿಶ್ವದ ಅತಿದೊಡ್ಡ ಹಿಂದೂ ದೇವಾಲಯ ಎಲ್ಲಿದೆ ಗೊತ್ತಾ…? ಸಾಧ್ಯವಾದರೆ ಬೇಟಿ ನೀಡಿ…!

ಜಗತ್ತಿನ ಅತಿ ದೊಡ್ಡ ಹಿಂದೂ ದೇವಾಲಯ ಎಲ್ಲಿದೆ ಎಂದು ಯಾರಾದರೂ ನಿಮ್ಮನ್ನು ಕೇಳಿದರೆ  ಅದು ಭಾರತದಲ್ಲಿದೆ ಅಥವಾ ನೇಪಾಳದಲ್ಲಿದೆ ಎಂದು ನಿಮ್ಮ ಉತ್ತರ ವಾಗಿರಬಹುದು ಆದರೆ ಅದು ನಿಜವಲ್ಲ. ಪ್ರಪಂಚದ ಅತಿದೊಡ್ಡ ಹಿಂದೂ ದೇವಾಲಯವು ಕಾಂಬೋಡಿಯಾದಲ್ಲಿ ಇದೆ.

ಕಾಂಬೋಡಿಯಾದಲ್ಲಿರುವ ಅಂಕೋರ್ ವಾಟ್ ದೇವಾಲಯ ಸಂಕೀರ್ಣವು ವಿಷ್ಣುವಿಗೆ ಸಮರ್ಪಿತವಾಗಿರುವ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯವಾಗಿದೆ. ಸಿಮ್ರಿಪ್ ಪಟ್ಟಣದಲ್ಲಿ ಮೆಕಾಂಗ್ ನದಿಯ ದಡದಲ್ಲಿ ನಿರ್ಮಿಸಲಾದ ಈ ದೇವಾಲಯವು ಖಮೇರ್ ವಾಸ್ತುಶಿಲ್ಪದ ಶಾಸ್ತ್ರೀಯ ಶೈಲಿಯನ್ನು ತೋರಿಸುತ್ತದೆ. ಇದು ನೂರಾರು ಚದರ ಮೈಲುಗಳಷ್ಟು ವಿಸ್ತರಿಸಲ್ಪಟ್ಟಿದೆ ಮತ್ತು ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ.ಈ ದೇವಾಲಯಕ್ಕೆ ವಿಶ್ವ ಪಾರಂಪರಿಕಾ ತಾಣದ ಪಟ್ಟ ಸಿಕ್ಕ ಮೇಲಂತೂ  ಪ್ರವಾಸಿಗರು ತಂಡೋಪತಂಡವಾಗಿ ದೇವಾಲಯವನ್ನು ನೋಡಲು ಹೋಗುತ್ತಿದ್ದಾರೆ

Sunset points: ಸುಂದರವಾದ ಸೂರ್ಯಾಸ್ತವನ್ನು ವೀಕ್ಷಿಸಲು ಖಂಡಿತವಾಗಿಯೂ ಬೆಂಗಳೂರಿನ ಈ ಸ್ಥಳಗಳಿಗೆ ಭೇಟಿ ನೀಡಿ…!

ಅಂಕೋರ್ ವಾಟ್ ಎಂದರೆ ದೇವಾಲಯ ನಗರ. ಅಂಕೋರ್ ವಾಟ್ ಅನ್ನು 12 ನೇ ಶತಮಾನದ ಮೊದಲಾರ್ಧದಲ್ಲಿ ನಿರ್ಮಿಸಲಾಯಿತು ಮತ್ತು 1113-50 ರಲ್ಲಿ ರಾಜ ಸೂರ್ಯವರ್ಮನ್ II ​​ನಿರ್ಮಿಸಿದನು.  ಕಾಂಬೋಡಿಯಾದಲ್ಲಿ ಈ ದೇವಾಲಯವನ್ನು ಕಟ್ಟಲು 402 ಎಕರೆ ಪ್ರದೇಶವನ್ನು ಉಪಯೋಗಿಸಲಾಗಿದೆ, ಇಲ್ಲಿ ಮುಖ್ಯವಾಗಿ ಇದನ್ನು ವಿಷ್ಣು ದೇವರನ್ನು ಪೂಜಿಸಲು ನಿರ್ಮಿಸಲಾಗಿದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...