Kannada Duniya

Kans Fort :ಮಥುರಾಗೆ ಹೋಗುವವರು ಒಮ್ಮೆ ಕಂಸನ ಕೋಟೆಗೆ ಭೇಟಿ ನೀಡಿ…!

ಮಥುರಾ ಹೆಸರು ಕೇಳಿದಾಗ ಮೊದಲು ನೆನಪಾಗುವುದು ಶ್ರೀಕೃಷ್ಣ. ಯಮುನಾ ಕರಾವಳಿಯ ದಂಡೆಯಲ್ಲಿರುವ ಈ ನಗರವು ಅನೇಕ ಐತಿಹಾಸಿಕ ಮತ್ತು ಧಾರ್ಮಿಕ ಕಟ್ಟಡಗಳು, ಅರಮನೆಗಳು ಮತ್ತು ಪವಿತ್ರ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿಗೆ ಅನೇಕ ಪ್ರವಾಸಿಗರು ಭೇಟಿ ನೀಡುತ್ತಾರೆ.

ಮಥುರಾದ ಕೃಷ್ಣನ ದೇವಾಲಯವನ್ನು ಹೊರತುಪಡಿಸಿ ಇಲ್ಲಿ ಭೇಟಿ ನೀಡುವ ಅತ್ಯಂತ ಪ್ರಸಿದ್ಧ ಸ್ಥಳವೆಂದರೆ ‘ಕನ್ಸ್ ಕೋಟೆ’ . ಶ್ರೀಕೃಷ್ಣನ ಮಾವ ಕಂಸಗೆ ಸೇರಿದ್ದ ಈ ಕೋಟೆಯು ಪ್ರಾಚೀನ ಕಾಲದಿಂದಲೂ ಪ್ರವಾಸಿಗರಿಗೆ ಪ್ರಮುಖ ಪ್ರವಾಸಿ ಕೇಂದ್ರವಾಗಿದೆ. ಈ ಕೋಟೆಯು ಮಹಾಭಾರತದ ಅವಧಿಯಲ್ಲಿ ಪಾಂಡವರಿಗೆ ವಿಶ್ರಾಂತಿ ಗೃಹವಾಗಿತ್ತು. ಬಳಿಕ 16ನೇ ಇಸವಿಯಲ್ಲಿ ಜೈಪುರದ ರಾಜ ಮನ್ ಸಿಂಗ್ ಅವರು ಅದನ್ನು ಪುನನಿರ್ಮಿಸಿದ್ದಾರೆ ಎಂದು ಇತಿಹಾಸಕಾರರು ಹೇಳುತ್ತಾರೆ.

ಮಥುರಾದ ಕನ್ಸ್ ಕೋಟೆ ಹಿಂದೂ ಮತ್ತು ಮೊಘಲ್ ಎರಡೂ ಶೈಲಿಗಳನ್ನು ಬೆರೆಸಿ ನಿರ್ಮಿಸಿದ ಕೋಟೆ ಎಂದು ಹೇಳಲಾಗುತ್ತದೆ. ಕನ್ಸ್ ಕೋಟೆಯ ಗೋಡೆಗಳಲ್ಲಿ ಹಿಂದೂ ದೇವರುಗಳು ಮತ್ತು ದೇವತೆಗಳ ಸುಂದರವಾದ ವಾಸ್ತು ಶಿಲ್ಪದ ಉದಾಹರಣೆಗಳು ಮತ್ತು ಮೊಘಲ್ ಶೈಲಿಯ ಉದಾಹರಣೆಗಳನ್ನು ಕಾಣಬಹುದು. ಮಹಾರಾಜ ಸವಾಯಿ ಜೈ ಸಿಂಗ್ ಅವರು ಕೋಟೆಯ ಆವರಣದಲ್ಲಿ ಒಂದು ವೀಕ್ಷಣಾಲಯವನ್ನು ನಿರ್ಮಿಸಿದ್ದರು. ಇದು ಕಾನ್ಸ್ ಕೋಟೆಯ ಕೇಂದ್ರಬಿಂದುವಾಗಿದೆ. ಮಥುರಾಗೆ ಬಂದವರು ಈ ವೀಕ್ಷಣಾಲಯವನ್ನು ನೋಡಲು ಕಾನ್ಸ್ ಕೋಟೆಗೆ ಬರುತ್ತಾರಂತೆ. ಈ ಕೋಟೆಯಲ್ಲಿ ಕೆಂಪು ಮರಳುಗಲ್ಲಿನಿಂದ ತಯಾರಿಸಿದ ಅನೇಕ ಬೃಹತ್ ಸ್ತಂಭಗಳಿವೆ.

ನೀವು ಕನ್ಸ್ ಕೋಟೆಗೆ ಹೋಗುವುದಾದರೆ ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಭೇಟಿ ನೀಡಬಹುದು. ಆದರೆ ಯಾವುದೇ ವಿಶೇಷ ಸಂದರ್ಭದಲ್ಲಿ ಈ ಕೋಟೆಗೆ ಭೇಟಿ ನೀಡಲು ಅನುಮತಿ ಇಲ್ಲ. ಅಲ್ಲದೇ ಈ ಕೋಟೆಗೆ ಭೇಟಿ ನೀಡಲು ಪ್ರವಾಸಿಗರಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಅಂದರೆ ಯಾವುದೇ ಟಿಕೆಟ್ ಪಡೆಯದೆ ಇಲ್ಲಿಗೆ ಹೋಗಬಹುದು. ಅಕ್ಟೋಬರ್ ನಿಂದ ಏಪ್ರಿಲ್ ತಿಂಗಳುಗಳಲ್ಲಿ ಮಥುರಾಗೆ ಭೇಟಿ ನೀಡಿದರೆ ಉತ್ತಮ.

Visit Kans qila in Mathura


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...