Kannada Duniya

ಬೆಂಗಳೂರಿನಿಂದ ಒನ್ ಡೇ ಟ್ರಿಪ್ ಹೋಗಬೇಕೆಂದರೆ ಚುಂಚಿಫಾಲ್ಸ್‌ಗೆ ಭೇಟಿ ನೀಡಿ…!

ಬೆಂಗಳೂರಿನ ಸುತ್ತಮುತ್ತಲಿರುವ ಯಾವುದಾದರೂ ಸ್ಥಳಕ್ಕೆ ಒನ್‌ ಡೇ ಟ್ರಿಪ್‌ ಹೋಗಬೇಕು ಎಂದು ಬಯಸುವುದಾದರೆ ಬೆಂಗಳೂರಿನಿಂದ 83  ಕಿ.ಮೀ ದೂರದಲ್ಲಿರುವ ಚುಂಚಿಫಾಲ್ಸ್‌ಗೆ ಭೇಟಿ ನೀಡಬಹುದು.

ಜಲಪಾತ ನೋಡಲು ಸುಂದರವಾಗಿದೆ. ಹೆಚ್ಚಿನ ಜನಸಂದಣಿಯೂ ಇರುವುದಿಲ್ಲ. ಸುತ್ತಲಿರುವ ಕಲ್ಲು ಬಂಡೆಗಳು, ಧುಮ್ಮಿಕ್ಕುವ ಜಲಪಾತದಿಂದಾಗಿ ಈ ಸ್ಥಳ ರಮಣೀಯ ತಾಣವಾಗಿದೆ.

ಅರ್ಕಾವತಿ ನದಿ ಸೃಷ್ಟಿಸಿರುವ ಈ ಸುಂದರ ಜಲಪಾತಕ್ಕೆ ಬೆಂಗಳೂರಿನಿಂದ ಕನಕಪುರ ಮಾರ್ಗವಾಗಿ ಬಂದು ಅಲ್ಲಿಂದ ಮೇಕೆದಾಟು ಹಾಗೂ ಸಂಗಮದ ಮಾರ್ಗದ ಮೂಲಕ ಸಾಗಬೇಕು. ಸಂಗಮ ಸಿಗುವುದಕ್ಕೆ ಸ್ವಲ್ಪ ಮುಂಚಿತವಾಗಿ ‘ಚುಂಚಿಫಾಲ್ಸ್’ ಫಲಕ ಕಾಣಸಿಗುತ್ತದೆ. ಅಲ್ಲಿಂದ ಸುಮಾರು 6 ಕಿ.ಮೀ ಹೋದರೆ ಸಾಕು ಈ ಸುಂದರ ಜಲಪಾತವನ್ನು ಕಣ್ತುಂಬಿಕೊಳ್ಳಬಹುದು.

Chunchi Waterfalls Falls Hotels Accommodation Resorts Karnataka

ನೀವು ತಪ್ಪದೆ ನೋಡಲೇಬೇಕಾದ ಸ್ಥಳ ಬೆಂಗಳೂರು ಹತ್ತಿರದ ಹೊಗೇನಕಲ್ ಫಾಲ್ಸ್…!

ಇಲ್ಲಿಗೆ ಹೋಗಲು ಕಾರಿಗಿಂತ ದ್ವಿಚಕ್ರ ಪ್ರಯಾಣ ಮತ್ತಷ್ಟು ಥ್ರಿಲ್‌ ಕೊಡುತ್ತದೆ. ಇನ್ನು ಇಲ್ಲಿಗೆ ಹೋಗುವಾಗ ತಿನ್ನಲು ಏನಾದರೂ ಕೊಂಡೊಯ್ಯುವುದು ಒಳ್ಳೆಯದು. ಒಂದು ದಿನದ ಟ್ರಿಪ್‌ ಅನ್ನು ಖುಷಿ-ಖುಷಿಯಾಗಿ ಕಳೆದು ಹಿಂತಿರುಗಬಹುದು.

Chunchi Falls near Bangalore| Timings, Images, When to Visit

ಚುಂಚಿ ಜಲಪಾತದ ಸಮೀಪದಲ್ಲಿ ಕೆಲವು ಆಕರ್ಷಣೆಗಳಿವೆ, ಅವುಗಳೆಂದರೆ ಸಂಗಮ ಚುಂಚಿಫಾಲ್ಸ್‌ , ಗಾಳಿಬೋರ್ ಮೀನುಗಾರಿಕೆ ಶಿಬಿರ, ಮೇಕೆದಾಟು ಜಲಪಾತ, ಭೀಮೇಶ್ವರಿ ಮತ್ತು ಮೈಸೂರಿನ ಇತರ ಪ್ರವಾಸಿ ತಾಣಗಳು. ತಮ್ಮ ಪ್ರವಾಸದಲ್ಲಿ ಚುಂಚಿ ಜಲಪಾತವನ್ನು ಒಳಗೊಂಡಿರುವ ಪ್ರವಾಸಿಗರು ಸಾಮಾನ್ಯವಾಗಿ ಜಲಪಾತದ ಜೊತೆಗೆ ಸಂಗಮ ಮತ್ತು ಮೇಕೆದಾಟುಗಳನ್ನು ಭೇಟಿ ಮಾಡುತ್ತಾರೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...