Kannada Duniya

ನೋಡಲೇಬೇಕಾದ ಸ್ಥಳಗಳು ಇಲ್ಲಿವೆ ನೋಡಿ ಕೆಮ್ಮಣ್ಣಗುಂಡಿಗೆ ಭೇಟಿ ನೀಡಿದಾಗ…!

ಬೆಂಗಳೂರಿನಿಂದ ಸುಮಾರು 250 ಕಿಮೀ ದೂರದಲ್ಲಿರುವ ಚಿಕ್ಕಮಗಳೂರಿನ ಜಿಲ್ಲೆಯಲ್ಲಿರುವ ಕೆಮ್ಮಣ್ಣಗುಂಡಿ  ಗಿರಿಧಾಮವು ಪ್ರಕೃತಿಗೆ ಹತ್ತಿರವಾಗಲು ಬಯಸುವ ಪ್ರಯಾಣಿಕರಿಗೆ ಸೂಕ್ತವಾಗಿದೆ. ರಮಣೀಯವಾದ ಟ್ರೆಕ್ಕಿಂಗ್ ಮಾರ್ಗಗಳು, ಸಾಕಷ್ಟು ಜಲಪಾತಗಳೊಂದಿಗೆ, ಕೆಮ್ಮನಗುಂಡಿಯು ವಾರಾಂತ್ಯದ  ಭೇಟಿಗೆ ಅತ್ಯುತ್ತಮ ಸ್ಥಳವಾಗಿದೆ, ಇಲ್ಲಿಂದ ನೀವು ಅದ್ಭುತವಾದ ಸೂರ್ಯಾಸ್ತದ ವೀಕ್ಷಣೆ ಮಾಡಬಹುದು.ಕೆಮ್ಮಣ್ಣಗುಂಡಿಗೆ ಭೇಟಿ ನೀಡಿದಾಗ ನೋಡಲೇಬೇಕಾದ ಸ್ಥಳಗಳು ಇಲ್ಲಿವೆ ನೋಡಿ

–ಕೃಷ್ಣರಾಜೇಂದ್ರ ಹೂವಿನ ಉದ್ಯಾನವನ ಮತ್ತು ರಾಕ್ ಗಾರ್ಡನ್ ಅನ್ನು ಕರ್ನಾಟಕದ ತೋಟಗಾರಿಕಾ ಇಲಾಖೆ ನಿರ್ವಹಿಸುತ್ತದೆ. ಅಲ್ಲಿ ಹಲವು ಬಗೆಯ ಗುಲಾಬಿಗಳನ್ನು ಬೆಳೆಸಲಾಗುತ್ತದೆ. ರಾಜಭವನ ಅತಿಥಿಗೃಹವು ಕೃಷ್ಣರಾಜೇಂದ್ರ ಉದ್ಯಾನವನದೊಳಗೆ ಇದೆ.

-ಹೆಬ್ಬೆ ಜಲಪಾತ:ಹೆಬ್ಬೆ ಜಲಪಾತವನ್ನು ತಲುಪಲು ಕೆಮ್ಮಣ್ಣುಗುಂಡಿ ಗಿರಿಧಾಮಕ್ಕೆ ಆಗಮಿಸಬೇಕು. ಕೆಮ್ಮಣ್ಣುಗುಂಡಿಗೆ ಹೋಗಲು ಬೀರೂರು ಅಥವಾ ಚಿಕ್ಕಮಗಳೂರಿನಿಂದ ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದು. ಹೆಬ್ಬೆ ಜಲಪಾತವನ್ನು ತಲುಪಲು ಕೆಮ್ಮಣ್ಣುಗುಂಡಿಯಿಂದ ಕೊನೆಯ 7 ಕಿಲೋಮೀಟರ್‌ಗಳನ್ನು ಕಾಲ್ನಡಿಗೆಯಲ್ಲಿ ಅಥವಾ ಸ್ಥಳೀಯ 4×4 ಜೀಪ್‌ಗಳನ್ನು ಬಾಡಿಗೆಗೆ ಪಡೆದುಕೊಳ್ಳಬೇಕು.

-ಕಲ್ಲತ್ತಿ ಜಲಪಾತವು ಕೆಮ್ಮನಗುಂಡಿ  ಗಿರಿಧಾಮದಿಂದ 10 ಕಿಲೋಮೀಟರ್ ದೂರದಲ್ಲಿದೆ. ಈ ಸ್ಥಳವು ಶಿವನಿಗೆ ಸಮರ್ಪಿತವಾದ ವೀರಬ್ರದೇಶ್ವರ ದೇವಾಲಯವನ್ನು ಹೊಂದಿದೆ.

-ಮುಳ್ಳಯ್ಯನಗಿರಿಯು ಕರ್ನಾಟಕದ ಅತ್ಯಂತ ಎತ್ತರದ ಶಿಖರವಾಗಿದೆ ಮತ್ತು ಶಿಖರದ ಮೇಲಿರುವ ದೇವಾಲಯಕ್ಕೆ ಹೆಸರುವಾಸಿಯಾಗಿದೆ.

-ಬಾಬಾ ಬುಡನ್‌ಗಿರಿ ಕರ್ನಾಟಕದ ಎರಡನೇ ಅತಿ ಎತ್ತರದ ಶಿಖರವಾಗಿದೆ. ಇದು ದರ್ಗಾ ಮತ್ತು ದತ್ತ ಪೀಠ ಧಾರ್ಮಿಕ ಸ್ಥಳಗಳನ್ನು ಹೊಂದಿದೆ.

-ಅತ್ತಿಗುಂಡಿ ಬಳಿಯ ಹೊನ್ನಮ್ಮನ ಹಳ್ಳದ ಜಲಪಾತ ಮತ್ತು ಹಿರೇಕೊಳಲೆ ಕೆರೆ ಪ್ರವಾಸಿಗರಲ್ಲಿ ಜನಪ್ರಿಯವಾಗಿದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...