Kannada Duniya

ಉದಯಪುರ ತಾಜ್ ಲೇಕ್ ಪ್ಯಾಲೇಸ್ ನೋಡಿದ್ದೀರಾ….? ಇದರ ಬಗ್ಗೆ ಮಾಹಿತಿ ಇಲ್ಲಿದೆ….!

ಕೆಲವು ಐತಿಹಾಸಿಕ ಕಟ್ಟಡಗಳು ವಿಭಿನ್ನವಾಗಿ ಕಾಣುತ್ತವೆ. ಅದರಲ್ಲಿ ಮುಖ್ಯವಾದದು ಉದಯಪುರ ಪಿಚೋಲಾ ಸರೋವರದ ಮೇಲೆ ನಿಂತಿರುವ ತಾಜ್ ಲೇಕ್ ಪ್ಯಾಲೇಸ್. ರಾಜರು, ಚಕ್ರವರ್ತಿಗಳ ಕಾಲದಿಂದಲೂ ಇದ್ದ ಈ ಅರಮನೆ ಇದೀಗ ಹೋಟೆಲ್ ಆಗಿ ಅತಿಥಿಗಳನ್ನು ಆಕರ್ಷಿಸುತ್ತಿದೆ. ಹಾಗಾಗಿ ಇದರ ಬಗ್ಗೆ ಇನ್ನಷ್ಟು ತಿಳಿಯೋಣ.

ಇದನ್ನು 18ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಇದು ಸರೋವರದ ಮಧ್ಯದಲ್ಲಿ ಇರುವುದರಿಂದ ಇದನ್ನು ಜಲ್ ಮಹಲ್ ಎಂದು ಕರೆಯುತ್ತಾರೆ. ಇಲ್ಲಿ 65 ಕೊಠಡಿಗಳಿವೆ. ಮತ್ತು 18 ಗ್ರ್ಯಾಂಡ್ ಸೂಟ್ ಗಳನ್ನು ಹೊಂದಿದೆ. ತಾಜ್ ಲೇಕ್ ಪ್ಯಾಲೇಸ್ ಅಮೃತಶಿಲೆಯಿಂದ ನಿರ್ಮಿಸಲಾಗಿದೆ. ಇಲ್ಲಿಗೆ ತಲುಪಲು ದೋಣಿ ಮೂಲಕ ಸವಾರಿ ಮಾಡಬೇಕು.

ಇದನ್ನು 1746ರಲ್ಲಿ ಮಹಾರಾಜ ಜಗತ್ ಸಿಂಗ್ 2 ಪಿಚೋಲಾ ಸರೋವರದ ಮೇಲೆ ನಿರ್ಮಿಸಿದ್ದಾನೆ. ತನ್ನ ತಂದೆ ತನ್ನ ಗೆಳತಿಯರೊಂದಿಗೆ ತಂದೆಯ ಅರಮನೆಯಲ್ಲಿರಲು ಅವಕಾಶ ನೀಡದೆ ಅವಮಾನ ಮಾಡಿದ ಕಾರಣ ಮಹಾರಾಜ ಜಗತ್ ಸಿಂಗ್ 2 ಈ ಅರಮನೆಯನ್ನು ನಿರ್ಮಿಸಿದ್ದಾನೆ. ಪಿಚೋಲಾ ಇದು ಕೃತಕ ಸರೋವರವಾಗಿದ್ದು, ಇದನ್ನು ಬಂಜಾರ ಬುಡಕಟ್ಟಿನ ಸದಸ್ಯ ಪಿಚು ಬಂಜಾರ ಎಂಬುವವನು ಧಾನ್ಯಗಳನ್ನು ಸಾಗಿಸಲು ನಿರ್ಮಿಸಿದ್ದಾನೆ ಎನ್ನಲಾಗಿದೆ. ಇದನ್ನು 1959ರಲ್ಲಿ ಹೋಟೆಲ್ ಆಗಿ ಪರಿವರ್ತಿಸಲಾಗಿದೆ.

ಈ ಅರಮನೆಯೊಳಗೆ ಒಂದು ಅರಮನೆ ಇದ್ದು, ಇದನ್ನು ಮಯೂರ್ ಮಹಲ್ ಎಂದು ಹೆಸರಿಡಲಾಗಿದೆ. ಇಲ್ಲಿ ಪ್ರವೇಶ ಮಂಟಪ, ಆಸನ ಪ್ರದೇಶ, ಮಲಗುವ ಕೋಣೆ, ಶೌಚಾಲಯಗಳು ಇವೆ. ಇದರ ನೆಲವನ್ನು ಅಮೃತಶಿಲೆಯಲ್ಲಿ ನಿರ್ಮಿಸಿದ್ದು, ರಾಜಸ್ಥಾನಿ ಕಲಾಕೃತಿಗಳಿಂದ, ವಿಭಿನ್ನ ನವಿಲು ವಿನ್ಯಾಸಗಳಿಂದ ಹಾಗೂ ಗಾಜಿನ ಕಲಾಕೃತಿಯಿಂದ ಅಲಂಕರಿಸಲಾಗಿದೆ. ಇಲ್ಲಿಗೆ ಅತಿಥಿಗಳು ಭೇಟಿ ನೀಡಬಹುದು. ಅವರನ್ನು ರಾಜಮಹಾರಾಜರಂತೆ ನೋಡಿಕೊಳ್ಳಲಾಗುತ್ತದೆ.

ಇಲ್ಲಿ ಅನೇಕ ಚಿತ್ರಗಳನ್ನು ಚಿತ್ರೀಕರಣ ಮಾಡಲಾಗಿದೆ. ಜೇಮ್ಸ್ ಬಾಂಡ್ ಅವರ ಆಕ್ಟೋಪಸ್ಸಿ, ಧಡಕ್, ಯೇ ಜವಾನಿ ಹೈ ದಿವಾನಿ, ಮಿರ್ಜಿಯಾ, ಧಮಾಲ್,  ರಾಮ್ ಲೀಲಾ ಮುಂತಾದ ಹಿಂದಿ ಚಿತ್ರಗಳನ್ನು ಚಿತ್ರೀಕರಿಸಲಾಗಿದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...