Kannada Duniya

ಈ ಅದ್ಭುತ ಜಲಪಾತಗಳು ಕನ್ಯಾಕುಮಾರಿಯಲ್ಲಿದೆ ….ಭೇಟಿ ಕೊಡಿ…!

ಭಾರತದ ದಕ್ಷಿಣ ತುದಿ ಕನ್ಯಾಕುಮಾರಿಯಲ್ಲಿ ಅತ್ಯುತ್ತಮ ಸ್ಥಳಗಳಿವೆ. ಅಲ್ಲಿನ ನೈಸರ್ಗಿಕ ಸೌಂದರ್ಯ ಬಹಳ ಅದ್ಭುತವಾಗಿದೆ. ಕನ್ಯಾಕುಮಾರಿಯಲ್ಲಿ ಅನೇಕ ಜಲಪಾತಗಳಿವೆ. ಇದು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅಂತಹ ಅದ್ಭುತವಾದ ಜಲಪಾತಗಳ ಬಗ್ಗೆ ಇಲ್ಲಿದೆ ಮಾಹಿತಿ.

ತಿರ್ಪರಪ್ಪು ಜಲಪಾತ (Thirparappu water fall) : ಕನ್ಯಾಕುಮಾರಿಯ ತೊಟ್ಟಿಪಾಲಂನಲ್ಲಿರುವ ತಿರ್ಪರಪ್ಪು ಜಲಪಾತವು ಅತ್ಯಂತ ಸುಂದರವಾದ ಜಲಪಾತವಾಗಿದೆ. ಜಲಪಾತದ ಬುಡದಲ್ಲಿ ಶಿವಾಲಯವು ಇದೆ. ಜಲಪಾತವು ವರ್ಷದುದ್ದಕ್ಕೂ ನೀರನ್ನು ಹೊಂದಿರುತ್ತದೆ. ಆದರೆ ಮಳೆಗಾಲದಲ್ಲಿ ಅದರ ಸೌಂದರ್ಯ ಇಮ್ಮಡಿಗೊಳ್ಳುತ್ತದೆ.

ವಟ್ಟಪರೈ ಜಲಪಾತ( Vattaparai Waterfall) : ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡುಬರುವ ಜಲಪಾತವೆಂದರೆ ಅದು ಪಜಾಯರ್ ನದಿಯ ಕಾಡಿನೊಳಗೆ ವಟ್ಟಾಪರೈ ಜಲಪಾತ. ಇದು ಅತ್ಯಂತ ಸುಂದರವಾದ ಜಲಪಾತಗಳಲ್ಲಿ ಒಂದಾಗಿದೆ. ಕೀರಿಪರೈ ರಿಸರ್ವ್ ಫಾರೆಸ್ಟ್ ನಲ್ಲಿರುವ ಇಲ್ಲಿಗೆ ಪ್ರಾಣಿಗಳು ಹೆಚ್ಚಾಗಿ ಬರುತ್ತವೆ.

ಮಣಿಮುಥರ್ ಜಲಪಾತ (Manimuthar Waterfall) : ಈ ಜಲಪಾತ ನದಿಯ ಮಣಿಮುಥರ್ ಅಣೆಕಟ್ಟಿನ ಸ್ವಲ್ಪ ಕೆಳಗೆ ಇದೆ. ಇದು ಕನ್ಯಾಕುಮಾರಿಯಲ್ಲಿರುವ ಅತ್ಯುತ್ತಮ ಗೇಟ್ ವೇ ಆಗಿದೆ. ಪೊಡಿಗೈ ಬೆಟ್ಟಗಳು ಮತ್ತು ಮಂಜೋಲೈ ಬೆಟ್ಟಗಳ ಚಹಾ ತೋಟಗಳಿಗೆ ಭೇಟಿ ನೀಡಿದಾಗ ನೀವು ಮಣಿಮುಥರ್ ಜಲಪಾತಕ್ಕೆ ಭೇಟಿ ನೀಡಬಹುದು.

Travel: ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳ ‘ರಾಮೇಶ್ವರಂ’….!

ಕೊರ್ಟಲಮ್ ಜಲಪಾತ (Courtallam Falls ): ಚಿತ್ತಾರ್ ನದಿಯ ಪಶ್ಚಿಮ ಘಟ್ಟದಲ್ಲಿ ನೆಲೆಗೊಂಡಿರುವ ಈ ಜಲಪಾತವು ವಾಸ್ತವವಾಗಿ ಒಂಬತ್ತು ಜಲಪಾತಗಳ ಗುಂಪು. ಈ ಜಲಪಾತವು ಅತಿ ಎತ್ತರದಿಂದ ಬೀಳುತ್ತದೆ ಮತ್ತು ಔಷಧೀಯ ಗುಣಗಳನ್ನು ಹೊಂದಿದೆ. ಜುಲೈ ಮಳೆಯ ನಂತರ ಇಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಾರೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...