Kannada Duniya

ಆಧ್ಯಾತ್ಮಿಕ ಮಹತ್ವ ಸಾರುವ ಓಂ ಬೀಚ್ ಬಗ್ಗೆ ತಿಳಿಬೇಕಾ…!

ಗೋಕರ್ಣದ ಓಂ ಬೀಚ್ ಅದರ ಭೌಗೋಳಿಕ ನೋಟಕ್ಕೆ ಸಂಬಂಧಿಸಿದಂತೆ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಈ ಕಡಲತೀರದ ಆಕಾರವು ‘ಓಂ’ ಚಿಹ್ನೆಯನ್ನು ಹೋಲುತ್ತದೆ. ಆದ್ದರಿಂದ ಇದನ್ನು ಸ್ಥಳೀಯರು ಅತ್ಯಂತ ಶುಭವೆಂದು ಪರಿಗಣಿಸುತ್ತಾರೆ. ಇಲ್ಲಿ ಎರಡು ಅರೆ-ಅರ್ಧಚಂದ್ರಾಕಾರದ ಭೂಮಿ  ಸೇರುವುದನ್ನು ನೀವು ನೋಡಬಹುದು. ಆದ ಕಾರಣ ಬೀಚ್ ಅನ್ನು ಈ ಗುರುತಿನಿಂದ ಗುರುತಿಸಲಾಗುತ್ತದೆ.

ಇಲ್ಲಿ ಬಾಳೆಹಣ್ಣಿನಾಕಾರದ ದೋಣಿ ಸವಾರಿ, ಬಂಪರ್ ಬೋಟ್ ಸವಾರಿ, ಡಾಲ್ಪಿನ್ ಸ್ಪಾಟಿಂಗ್, ಮೀನುಗಾರಿಕೆ, ಚಾರಣ ಮತ್ತು ವೇಗದ ದೋಣಿ ವಿಹಾರ ಸೇರಿದಂತೆ ಕೆಲವು ಸಾಹಸ ಚಟುವಟಿಕೆಗಳನ್ನು ಇಲ್ಲಿ ಪ್ರಯತ್ನಿಸಬಹುದು.

ಕಡಲತೀರವು ಪ್ರಸಿದ್ಧ ಸರ್ಫಿಂಗ್ ಮತ್ತು ಟ್ರೆಕ್ಕಿಂಗ್ ತಾಣವಾಗಿ ಜನಪ್ರಿಯತೆಯನ್ನು ಗಳಿಸಿದೆ. ನಿಮ್ಮ ಪ್ರವಾಸದಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಲು ಗೋಕರ್ಣ ಬೀಚ್‌ನಲ್ಲಿ ನೀವು  ಜಲ ಕ್ರೀಡೆಗಳನ್ನು ಆನಂದಿಸಬಹುದು.

ಪಶ್ಚಿಮ ಘಟ್ಟಗಳ ಅವಿಸ್ಮರಣೀಯ ನೋಟವನ್ನು ನೀಡುವಂತಹ ಮಂಜರಾಬಾದ್ ಕೋಟೆ ಬಗ್ಗೆ ತಿಳಿಬೇಕಾ?

ಬಸ್ , ಆಟೋರಿಕ್ಷಾ ಮತ್ತು ಬಾಡಿಗೆ ಕ್ಯಾಬ್ ಬಳಸಿ ಇಲ್ಲಿಗೆ ಪ್ರಯಾಣ ಬೆಳೆಸಬಹುದು. ಅಲ್ಲದೇ ಹಲವು ರೈಲು ಗೋಕರ್ಣದ ಮೂಲಕ ಹಾದುಹೋಗುತ್ತದೆ. ಇದರಿಂದ ರೈಲಿನ ಮೂಲಕ ಇಲ್ಲಿಗೆ ಪ್ರಯಾಣ ಬೆಳೆಸಬಹುದು. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗೋಕರ್ಣ ಕೇವಲ 238 ಕಿ.ಮಿ ದೂರದಲ್ಲಿದೆ. ಆದ್ದರಿಂದ ಗೋಕರ್ಣಕ್ಕೆ ವಿಮಾನದ ಮೂಲಕವೂ ಕೂಡ ಪ್ರಯಾಣ ಮಾಡಬಹುದು.

ಇದು ಕರಾವಳಿ ತೀರವಾದ್ದರಿಂದ ಬೇಸಿಗೆ ಕಾಲದಲ್ಲಿ ತಾಪಮಾನ ತುಂಬಾ ಬಿಸಿಯಾಗಿರುತ್ತದೆ. ಮತ್ತು ಮಳೆಗಾಲದಲ್ಲಿ ತುಂಬಾ ಮಳೆಯಾಗುತ್ತದೆ. ಹಾಗಾಗಿ ಚಳಿಗಾಲದ ಅವಧಿಯಲ್ಲಿ ಅಂದರೆ ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಗೋಕರ್ಣದ ಓಂ ಬೀಚ್ ಗೆ ಭೇಟಿ ನೀಡಬಹುದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...