Kannada Duniya

ಸಂತೋಷ, ಸಂಪತ್ತಿಗಾಗಿ ಹೋಳಿ ಹುಣ್ಣಿಮೆಯಂದು ಲಕ್ಷ್ಮಿದೇವಿಯನ್ನು ಈ ರೀತಿ ಪೂಜಿಸಿ…!

ಹೋಳಿ ಹುಣ್ಣಿಮೆಯ ದಿನದಂದು ಹೋಲಿಕಾ ದಹನ್ ಹಬ್ಬವನ್ನು ಆಚರಿಸಲಾಗುತ್ತದೆ. ನಿಮ್ಮ ಜೀವನದಲ್ಲಿ , ಮನೆಯಲ್ಲಿ ಸುಖ, ಶಾಂತಿ, ಸಂತೋಷ , ಸಮದ್ಧಿ ತುಂಬಿರಲು ಅಂದು ಮನೆಯಲ್ಲಿ ಲಕ್ಷ್ಮಿದೇವಿಯನ್ನು ಈ ರೀತಿಯಲ್ಲಿ ಪೂಜಿಸಿ.

ಅಂದು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ಸ್ನಾನಾಧಿಗಳನ್ನು ಮಾಡಿ ಶುಭ್ರ ಬಟ್ಟೆಯನ್ನು ಧರಿಸಿ ಲಕ್ಷ್ಮಿಯನ್ನು ಪೂಜಿಸಬೇಕು. ಲಕ್ಷ್ಮಿ ದೇವಿಗೆ ಕೆಂಪು ಹೂ, ಸಿಂಧೂರ, ಸುಗಂಧ ದ್ರವ್ಯಗಳನ್ನು ಅರ್ಪಿಸಬೇಕು. ಸಂತೋಷ ಪ್ರಾಪ್ತಿಯಾಗಲು ಶಂಖದಿಂದ ಲಕ್ಷ್ಮಿದೇವಿಗೆ ಅಭಿಷೇಕ ಮಾಡಿಸಬೇಕು. ಹಾಗೇ ಸಂಪತ್ತು ಪ್ರಾಪ್ತಿಗಾಗಿ 5 ಮಂದಿ ಕನ್ಯೆಯರಿಗೆ ಖೀರ್ ಅನ್ನು ನೀಡಬೇಕು. ಬಟ್ಟೆಗಳನ್ನು ದಾನ ಮಾಡಬೇಕು.

ಮನೆಯಲ್ಲಿ ಈ ವಸ್ತುಗಳಿದ್ದರೆ ಲಕ್ಷ್ಮಿದೇವಿ ಮನೆಬಿಟ್ಟು ಹೋಗುವುದಿಲ್ಲವಂತೆ…!

ಹಾಗೇ ಅರಶಿನ , ಕುಂಕುಮಗಳ ಮುದ್ದೆ ಮತ್ತು ಬೆಳ್ಳಿ ನಾಣ್ಯಗಳಿಗೆ ಪೂಜಿಸಿ ಅದನ್ನು ಹಳದಿ ಬಟ್ಟೆಯಲ್ಲಿ ಸುತ್ತಿ ಸಂಪತ್ತಿಡುವ ಸ್ಥಳದಲ್ಲಿ ಇಡಬೇಕು. ಅಂದು ಉಪವಾಸ ಮಾಡುವುದರಿಂದ ನೋವುಗಳು ನಿವಾರಣೆಯಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...