Kannada Duniya

ಈ ಕೆಲಸ ಮಾಡಿದ್ರೆ ನೀವು ಕಿವುಡರಾಗೋದು ಗ್ಯಾರಂಟಿ.!

ಈಗ ಎಲ್ಲರ ಕೈಯಲ್ಲೂ ಮೊಬೈಲ್. 24 ಗಂಟೆಯೂ ಸ್ಮಾರ್ಟ್ ಫೋನ್ ಇರಲೇಬೇಕು. ಆದ್ರೆ ಈ ರೀತಿ ಮೊಬೈಲ್ ವಿಕಿರಣಕ್ಕೆ ನಿರಂತರವಾಗಿ ಒಡ್ಡಿಕೊಳ್ಳುವುದು ಅತ್ಯಂತ ಅಪಾಯಕಾರಿ. ದಿನವಿಡೀ ಇಯರ್‌ಫೋನ್‌ ಬಳಸುವ ಅಭ್ಯಾಸವೇನಾದ್ರೂ ಇದ್ರೆ ನೀವು ಶೀಘ್ರದಲ್ಲೇ ಕಿವುಡರಾಗೋದು ಗ್ಯಾರಂಟಿ.

ಯಾಕಂದ್ರೆ ದೀರ್ಘಕಾಲ ಇಯರ್ ಫೋನ್ ಬಳಸುವುದರಿಂದ ಕಿವಿಯ ತಮಟೆಗೆ ಹಾನಿಯಾಗುತ್ತದೆ. ಜನರು ಫೋನ್‌ ನಲ್ಲೇ ಗಂಟೆಗಟ್ಟಲೆ ಕಾಲ ಕಳೆಯುತ್ತಾರೆ. ಯಾವಾಗ್ಲೂ ಇಯರ್ ಫೋನ್ ಹಾಕಿಕೊಂಡು ಸಂಗೀತ ಆಲಿಸ್ತಿರ್ತಾರೆ. ಇದರಿಂದ ಕಿವಿಗಳು ತಾತ್ಕಾಲಿಕವಾಗು ಅಥವಾ ಶಾಶ್ವತವಾಗಿ ಕಿವುಡಾಗಬಹುದು.

ನಗರ ಪ್ರದೇಶದ ಜನರಲ್ಲಿ ಶಬ್ಧ ಪ್ರೇರಿತ ಶ್ರವಣ ನಷ್ಟ (NIHL) ಹೆಚ್ಚಾಗಿ ಕಂಡುಬರುತ್ತಿದೆ. ಗದ್ದಲದ ವಾತಾವರಣದಲ್ಲಿ ಕೆಲಸ ಮಾಡಿದ್ರೆ, ದಿಢೀರನೆ ಯಾವುದಾದ್ರೂ ಶಬ್ಧ ಕಿವಿಗೆ ಅಪ್ಪಳಿಸಿದ್ರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನಿಮ್ಮ ಕಿವಿಗಳ ನರಕ್ಕೆ ಹಾನಿಯಾಗುವುದರಿಂದ ಕಿವುಡುತನ ಬರಬಹುದು.

ಕಿವಿ ಸಂಪೂರ್ಣ ಕಿವುಡಾಗುತ್ತಿರುವುದು ಆರಂಭದಲ್ಲಿ ನಿಮ್ಮ ಗಮನಕ್ಕೆ ಬರುವುದೇ ಇಲ್ಲ. ನಿಮಗೆ ಅರಿವಿಲ್ಲದಂತೆಯೇ ಶ್ರವಣ ಶಕ್ತಿ ನಿಧಾನವಾಗಿ ಕುಂಠಿತವಾಗುತ್ತಾ ಹೋಗುತ್ತದೆ. 40 ಡೆಸಿಬಲ್ ಗಿಂತ ಹೆಚ್ಚಿನ ಶಬ್ಧ ಕಿವಿಗೆ ಅತ್ಯಂತ ಅಪಾಯಕಾರಿ. ಹಾಗಾಗಿ ಹಾಡುಗಳನ್ನು ಕೇಳುವಾಗ್ಲೂ ವಾಲ್ಯೂಮ್ ಕಡಿಮೆ ಇಟ್ಟುಕೊಳ್ಳುವುದು ಒಳಿತು.

ಆನ್‌ಲೈನ್‌ನಲ್ಲಿ ಹೆಚ್ಚಿನ ಸುದ್ದಿಗಳಿಗಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಆನಂದಿಸಿ !!!


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...