Kannada Duniya

chanyaka niti: ಯೌವನದಲ್ಲಿ ಈ ಅಭ್ಯಾಸಗಳಿಗೆ ದಾಸರಾದರೆ ಜೀವನದಲ್ಲಿ ಏಳಿಗೆ ಇರುವುದಿಲ್ಲ…!

ಆಚಾರ್ಯ ಚಾಣಕ್ಯರು ನೀತಿಶಾಸ್ತ್ರವನ್ನು ರಚಿಸಿದ್ದು, ಇದರಲ್ಲಿ ಜೀವನಕ್ಕೆ ಸಂಬಂಧಿಸಿದ ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ಇದರ ಪ್ರಕಾರ ನಡೆದರೆ ನೀವು ಜೀವನದಲ್ಲಿ ಏಳಿಗೆ ಕಾಣಬಹುದು. ಅವರ ಪ್ರಕಾರ ವ್ಯಕ್ತಿ ಯೌವನದಲ್ಲಿ ಈ ಅಭ್ಯಾಸಗಳಿಂದ ದೂರವಿರಬೇಕಂತೆ. ಇಲ್ಲವಾದರೆ ಅವರ ಜೀವನ ಹಾಳಾಗುತ್ತದೆಯಂತೆ….!

-ಚಾಣಕ್ಯರ ಪ್ರಕಾರ ವ್ಯಕ್ತಿ ಯೌವನದಲ್ಲಿ ಕೆಟ್ಟವರ ಜೊತೆ ಗೆಳೆತನ ಮಾಡಬಾರದಂತೆ. ಇದು ಜೀವನದ ಮೇಲೆ ನೇರ ಪರಿಣಾಮಬೀರುತ್ತದೆಯಂತೆ. ಹಾಗಾಗಿ ಸ್ನೇಹ ಬೆಳೆಸುವಾಗ ಎಚ್ಚರಿಕೆಯಿಂದಿರಬೇಕಂತೆ. ಒಳ್ಳೆಯವರ ಸಹವಾಸ ಮಾಡಿದರೆ ನಿಮ್ಮ ಜೀವನದಲ್ಲಿ ಏಳಿಗೆ ಕಾಣುತ್ತೀರಿ ಎಂಬುದಾಗಿ ತಿಳಿಸಿದ್ದಾರೆ.

-ವ್ಯಕ್ತಿ ಯೌವನದಲ್ಲಿ ಮಾದಕ ವಸ್ತುಗಳಿಂದ ದೂರವಿರಬೇಕು. ಯೌವನದಲ್ಲಿ ಕೆಟ್ಟ ಅಭ್ಯಾಸಗಳನ್ನು ಬೆಳೆಸಿಕೊಂಡರೆ ಅವುಗಳನ್ನು ಬಿಡುವುದು ತುಂಬಾ ಕಷ್ಟವಾಗುತ್ತದೆ. ಇದರಿಂದ ವ್ಯಕ್ತಿ ಮಾದಕ ದ್ರವ್ಯ ವ್ಯಸನಿಯಾಗುತ್ತಾನೆ. ಇದರಿಂದ ಇಡೀ ಜೀವನದ ಜೊತೆಗೆ ಆರೋಗ್ಯ ಹಾಳಾಗುತ್ತದೆ.

 ದೇವಿಯನ್ನು ಕನಸಿನಲ್ಲಿ ಕಂಡರೆ ಶುಭ, ಅಶುಭ, ಕನಸಿನ ಗ್ರಂಥ ಏನು ಹೇಳುತ್ತದೆ ಎಂದು ತಿಳಿಯಿರಿ….!

-ಯೌವನದಲ್ಲಿ ವ್ಯಕ್ತಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಏಕೆಂದರೆ ಯೌವನದಲ್ಲಿ ಆರೋಗ್ಯ ಚೆನ್ನಾಗಿದ್ದರೆ ಮನಸ್ಸು ಕೂಡ ಚೆನ್ನಾಗಿರುತ್ತದೆ. ಇದರಿಂದ ಮೆದುಳು ಚೆನ್ನಾಗಿ ಕೆಲಸ ಮಾಡುತ್ತದೆ. ಇದು ಉತ್ತಮ ಭವಿಷ್ಯವನ್ನು ನಿರ್ಮಿಸಲು ಸಹಾಯ ಮಾಡುತ್ತದೆ.

 

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...