Kannada Duniya

ಮಹಾಶಿವರಾತ್ರಿಯ ದಿನ ನಿಮ್ಮ ರಾಶಿಚಕ್ರಕ್ಕನುಗುಣವಾಗಿ ಅಭಿಷೇಕ ಮಾಡಿಸಿ ಶಿವನ ಅನುಗ್ರಹ ಪಡೆಯಿರಿ

ಮಹಾಶಿವರಾತ್ರಿ ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದು. ಈ ವರ್ಷ ಮಾರ್ಚ್ 8ರಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಈ ದಿನ ಶಿವ ಪಾರ್ವತಿಯ ಪೂಜೆ ಮಾಡಲಾಗುತ್ತದೆ. ಈ ದಿನ ಕೆಲವು ಯೋಗಗಳು ರೂಪುಗೊಳ್ಳುತ್ತದೆ. ಹಾಗಾಗಿ ನಿಮ್ಮ ರಾಶಿಗನುಗುಣವಾಗಿ ಶಿವಲಿಂಗಕ್ಕೆ ಅಭಿಷೇಕ ಮಾಡಿಸಿ ನಿಮ್ಮ ಇಷ್ಟಾರ್ಥಗಳನ್ನ ಈಡೇರಿಸಿಕೊಳ್ಳಿ.

ಮೇಷ ರಾಶಿ : ಇವರು ಈ ದಿನ ಗಂಗಾಜಲದಲ್ಲಿ ಸಕ್ಕರೆ ಅಥವಾ ಬೆಲ್ಲವನ್ನು ಬೆರೆಸಿ ಶಿವನಿಗೆ ಅಬೀಷೇಕ ಮಾಡಿಸಿ.

ವೃಷಭ ರಾಶಿ : ನೀವು ಹಾಲು ಮೊಸರಿನಿಂದ ಶಿವನಿಗೆ ಅಭಿಷೇಕ ಮಾಡಿಸಿ ಆರ್ಥಿಕ ಸಮಸ್ಯಗಳು ನಿವಾರಣೆಯಾಗುತ್ತದೆಯಂತೆ.

ಮಿಥುನ ರಾಶಿ: ಈ ರಾಶಿಯವರು ಮಹಾಶಿವರಾತ್ರಿಯ ದಿನ ಶಿವಲಿಂಗಕ್ಕೆ ಕಬ್ಬಿನ ರಸದಿಂದ ಅಭಿಷೇಕ ಮಾಡಿಸಿ.

ಕಟಕ ರಾಶಿ :ಇವರು ಹಾಲಿಗೆ ಸಕ್ಕರೆ ಬೆರೆಸಿ ಶಿವನಿಗೆ ಅಭಿಷೇಕ ಮಾಡಿಸಿದರೆ ಒಳ್ಳೆಯದು.

ಸಿಂಹ ರಾಶಿ :ನೀವು ಕೆಂಪು ಚಂದನವನ್ನು ಶುದ್ಧವಾದ ನೀರಿನಲ್ಲಿ ಬೆರೆಸಿ ಅಭಿಷೇಕ ಮಾಡಿಸಿದರೆ ಉತ್ತಮ.

ಕನ್ಯಾ ರಾಶಿ: ನೀವು ಮಹಾಶಿವರಾತ್ರಿಯ ದಿನ ಶಿವನಿಗೆ ದೂರ್ವಾ ಮತ್ತು ಶುದ್ಧ ನೀರಿನಿಂದ ಅಭಿಷೇಕ ಮಾಡಿಸಿ.

ತುಲಾ ರಾಶಿ: ಈ ರಾಶಿಯವರು ತುಪ್ಪ ಮತ್ತು ಗುಲಾಬಿ ಸುಗಂಧ ದ್ರವ್ಯದಿಂದ ಅಭಿಷೇಕ ಮಾಡಿಸಿದರೆ ಒಳ್ಳೆಯದಂತೆ.

ವೃಶ್ಚಿಕ ರಾಶಿ: ಇವರು ಶುದ್ಧ ನೀರಿನಲ್ಲಿ ಸಕ್ಕರೆ ಮತ್ತು ಜೇನುತುಪ್ಪ ಬೆರೆಸಿ ಶಿವನಿಗೆ ಅಭಿಷೇಕ ಮಾಡಿಸಿ.

ಧನು ರಾಶಿ: ಇವರು ಹಾಲಿಗೆ ಸಕ್ಕರೆ ಬೆರೆಸಿ ಶಿವನಿಗೆ ಅಭಿಷೇಕ ಮಾಡಿಸಿದರೆ ಸಮಸ್ಯೆಗಳು ದೂರವಾಗುತ್ತದೆಯಂತೆ.

ಮಕರ ರಾಶಿ: ಇವರು ಶಿವಲಿಂಗಕ್ಕೆ ಎಳ್ಳೆಣ್ಣೆಯಿಂದ ಅಭಿಷೇಕ ಮಾಡಿಸಿದರೆ ಫಲಪ್ರದವಾಗುತ್ತದೆಯಂತೆ.

ಕುಂಭ ರಾಶಿ:ಈ ರಾಶಿಯ ಕನರು ಮಹಾಶಿವರಾತ್ರಿಯ ದಿನ ಶಿವನಿಗೆ ಪಂಚಾಮೃತದಿಂದ ಅಭಿಷೇಕ ಮಾಡಿಸಬೇಕಂತೆ.

ಮೀನ ರಾಶಿ : ಮೀನ ರಾಶಿಯವರು ನೀರಿನಲ್ಲಿ ಕುಂಕುಮ ಬೆರೆಸಿ ಶಿವಲಿಂಗಕ್ಕೆ ಅಭಿಷೇಕ ಮಾಡಿಸಿದರೆ ಒಳ್ಳೆಯದಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...