Kannada Duniya

ಗುರುವಾರ ಹಳದಿ ಬಟ್ಟೆಗಳನ್ನು ಧರಿಸಿದರೆ ಶುಭ ಯಾಕೆ ಗೊತ್ತಾ…?

ಪ್ರತಿಯೊಂದು ಬಣ್ಣವೂ ವಿಶೇಷವಾದದ್ದನ್ನು ಹೊಂದಿರುತ್ತದೆ. ಅಲ್ಲದೇ ಪ್ರತಿಯೊಂದು ಬಣ್ಣವು ಅದರದ್ದೇ ಆದ ಅರ್ಥವನ್ನು ಹೊಂದಿರುತ್ತದೆ. ಈ ಕಾರಣದಿಂದ ಪ್ರತಿದಿನ ವಿಭಿನ್ನ ಬಣ್ಣದ ಬಟ್ಟೆಗಳನ್ನು ಧರಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ. ಅದರಲ್ಲೂ ಗುರುವಾರದಂದು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಶುಭವೆಂದು ಹೇಳಲಾಗುತ್ತದೆ. ಇದಕ್ಕೆ ಕಾರಣವೇನು ಎಂಬುದನ್ನು ತಿಳಿಯಿರಿ.

ಹಿಂದೂ ಧರ್ಮದ ಪ್ರಕಾರ ಹಳದಿ ಬಣ್ಣ ವಿಷ್ಣು ಮತ್ತು ಬ್ರಹಸ್ಪತಿಗೆ ಪ್ರಿಯವಾದ ಬಣ್ಣವಾಗಿದೆ. ಹಾಗಾಗಿ ಹಳದಿ ಬಣ್ಣವನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಗುರುವಾರದಂದು ಹಳದಿ ಬಟ್ಟೆಯನ್ನು ಧರಿಸಿದರೆ ರೋಗರುಜಿನಗಳು ದೂರವಾಗುತ್ತವೆಯಂತೆ.

ವಾಸ್ತು ಪ್ರಕಾರ ಮನೆಯ ಯಾವ ಕೋಣೆಯಲ್ಲಿ ಯಾವ ಬಣ್ಣವಿದ್ದರೆ ಒಳ್ಳೆಯದು

ಹಳದಿ ಬಣ್ಣವು ಸಮೃದ್ಧಿಯನ್ನು ತರುತ್ತದೆ. ಹಾಗಾಗಿ ಗುರುವಾರದಂದು ಹಳದಿ ಬಟ್ಟೆಯನ್ನು ಧರಿಸುವುದು ಉತ್ತಮ ಎನ್ನಲಾಗಿದೆ. ಒಂದು ವೇಳೆ ಸಾಧ್ಯವಾಗದಿದ್ದರೆ ಕೆಲವು ಶುಭ ಕೆಲಸಗಳಿಗೆ ಹೋಗುವಾಗ ಹಳದಿ ಬಟ್ಟೆ ಧರಿಸಿ. ಹಳದಿ ಬಟ್ಟೆ ನಕರಾತ್ಮಕತೆಯನ್ನು ಹೋಗಲಾಡಿಸಿ ನಿಮ್ಮಲ್ಲಿ ಸಕರಾತ್ಮಕತೆಯನ್ನು ಹೆಚ್ಚಿಸುತ್ತದೆ.

-ಅವಿವಾಹಿತರು ಹಳದಿ ಬಟ್ಟೆ ಧರಿಸುವುದರಿಂದ ಮದುವೆ ವಿಚಾರದಲ್ಲಿ ಎದುರಾಗುವ ಅಡೆತಡೆಗಳು ನಿವಾರಣೆಯಾಗುತ್ತದೆ. ಗುರುವಿನ ಅನುಗ್ರಹವಿದ್ದರೆ ಮಾತ್ರ ಅವರಿಗೆ ಶೀಘ್ರದಲ್ಲಿಯೇ ವಿವಾಹ ಯೋಗ ಕೂಡಿ ಬರುತ್ತದೆ. ಹಾಗಾಗಿ ಹಳದಿ ಬಟ್ಟೆ ಧರಿಸಿದರೆ ಸಂಬಂಧ ಅವರನ್ನು ಹುಡುಕಿಕೊಂಡು ಬರುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...