Kannada Duniya

ಈ ಸ್ಥಳದಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಮಾಡಿ ಸಮಸ್ಯೆಗಳನ್ನು ದೂರ ಮಾಡಿ…!

ಹಿಂದೂ ಧರ್ಮದಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಯಾವುದೇ ಶುಭ ಕೆಲಸಗಳನ್ನು ಮಾಡುವ ಮೊದಲು ಸ್ವಸ್ತಿಕ್ ಚಿಹ್ನೆಯನ್ನು ಬಿಡಿಸಲಾಗುತ್ತದೆ. ಮತ್ತು ಪೂಜಿಸಲಾಗುತ್ತದೆ. ಇದು ಗಣೇಶನ ಸ್ವರೂಪವೆಂದು ನಂಬಿಕೆ ಇದೆ. ಹಾಗಾಗಿ ಇದನ್ನು ಮನೆಯ ಈ ಸ್ಥಳಗಳಲ್ಲಿ ಬಿಡಿಸಿದರೆ ತುಂಬಾ ಉತ್ತಮ.

ವಾಸ್ತುಶಾಸ್ತ್ರದ ಪ್ರಕಾರ ಮನೆಯ ಮುಖ್ಯದ್ವಾರದ ಎರಡೂ ಗೋಡೆಗಳ ಮೇಲೆ ಸ್ವಸ್ತಿಕ್ ಚಿಹ್ನೆಗಳನ್ನು ಮಾಡಿದರೆ ಅದು ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಯಾವುದೇ ರೀತಿಯ ವಾಸ್ತುದೋಷವಿದ್ದರೂ ದೂರವಾಗುತ್ತದೆ, ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸಿರುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಅಂಗಳದ ಮಧ್ಯದಲ್ಲಿ ಸ್ವಸ್ತಿಕ್ ಮಾಡಿದರೆ ತುಂಬಾ ಒಳ್ಳೆಯದು. ಅದರಲ್ಲೂ ಪಿತೃಪಕ್ಷದ ಸಮಯದಲ್ಲಿ ಮನೆಯ ಅಂಗಳ ಮಧ್ಯದಲ್ಲಿ ಗೋವಿನ ಸಗಣಿಯಿಂದ ಸ್ವಸ್ತಿಕ್ ಚಿಹ್ನೆ ಮಾಡಿದರೆ ಪೂರ್ವಜನ ಆಶೀರ್ವಾದ ಸಿಗುತ್ತದೆ.

ಮನೆಯಲ್ಲಿ ಕರ್ಪೂರ ಮತ್ತು ಲವಂಗವನ್ನು ಸುಟ್ಟರೆ ಏನಾಗುತ್ತದೆ ಗೊತ್ತಾ?

ನಿಮ್ಮ ಮನೆಯ ದೇವರ ಕೋಣೆಯಲ್ಲಿ ಸ್ವಸ್ತಿಕ್ ಚಿಹ್ನೆ ಮಾಡುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ದೇವರ ಕೋಣೆಯ ಬಾಗಿಲಿನ ಮೇಲೆ ಸ್ವಸ್ತಿಕ್ ಚಿಹ್ನೆ ಬರೆಯಿರಿ ಮತ್ತು ಸ್ವಸ್ತಿಕ್ ಚಿಹ್ನೆಯನ್ನು ಬಿಡಿಸಿದ ಸ್ಥಳದಲ್ಲಿ ದೇವರ ವಿಗ್ರಹವನ್ನು ಸ್ಥಾಪಿಸಿದರೆ ದೇವರ ಅನುಗ್ರಹ ನಿಮಗೆ ಸಿಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...