Kannada Duniya

ಈ ವಿಚಾರಗಳನ್ನು ಬೇರೆಯವರೊಂದಿಗೆ ಹಂಚಿಕೊಂಡರೆ ನಷ್ಟಕ್ಕೆ ಒಳಗಾಗುತ್ತೀರಿ….!

ಆಚಾರ್ಯ ಚಾಣಕ್ಯರ ನೀತಿಗಳು ಇಂದಿನ ಕಾಲದಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಅವರ ನೀತಿಶಾಸ್ತ್ರದಲ್ಲಿ ಜೀವನದಲ್ಲಿ ಸಂತೋಷವಾಗಿರಲು ಹಲವು ವಿಚಾರಗಳನ್ನು ಹೇಳಲಾಗಿದೆ. ನೀವು ಅದರಂತೆ ಅನುಸರಿಸಿದರೆ ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.

ಸಾಮಾನ್ಯವಾಗಿ ವ್ಯಕ್ತಿಯು ತನ್ನ ವಿಚಾರಗಳನ್ನು ಸ್ನೇಹಿತರು, ಕುಟುಂಬದವರೊಂದಿಗೆ ಹಂಚಿಕೊಳ್ಳುತ್ತಾರೆ. ಆದರೆ ಚಾಣಕ್ಯ ನೀತಿಯ ಪ್ರಕಾರ ವ್ಯಕ್ತಿಯು ಈ ವಿಚಾರಗಳನ್ನು ಬೇರೆಯವರೊಂದಿಗೆ ಹಂಚಿಕೊಂಡರೆ ನಷ್ಟಕ್ಕೆ ಒಳಗಾಗುತ್ತಾರಂತೆ. ಅದು ಯಾವ ವಿಚಾರ ಎಂಬುದನ್ನು ತಿಳಿಯೋಣ.

ಹಣದ ವಿಚಾರ : ಚಾಣಕ್ಯ ನೀತಿಯ ಪ್ರಕಾರ ವ್ಯಕ್ತಿಯು ಹಣಕ್ಕೆ ಸಂಬಂಧಿಸಿದ ವಿಚಾರವನ್ನು ಯಾರೊಂದಿಗೂ ಹಂಚಿಕೊಳ್ಳಬಾರದಂತೆ. ನೀವು ಎಷ್ಟು ಹಣ ಸಂಪಾದಿಸುತ್ತೀರಿ, ನಿಮ್ಮ ಆರ್ಥಿಕ ಸ್ಥಿತಿ ಹೇಗಿದೆ ಈ ಬಗ್ಗೆ ಯಾರಿಗೂ ಹೇಳಬಾರದಂತೆ. ಇದರಿಂದ ನೀವು ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಚಾಣಕ್ಯರು ತಿಳಿಸಿದ್ದಾರೆ.

ದುಃಖದ ವಿಚಾರಗಳು : ಸಂತೋಷ ಮತ್ತು ದುಃಖ ಜೀವನದ ಪ್ರಮುಖ ಭಾಗಗಳಾಗಿವೆ. ಜನರು ಹೆಚ್ಚಾಗಿ ಸಂತೋಷದಿಂದ ಇರಲು ಇಷ್ಟಪಡುತ್ತಾರೆ. ಆದರೆ ನೀವು ದುಃಖದಲ್ಲಿದ್ದರೆ ಈ ವಿಚಾರವನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಇದರಿಂದ ಅವರು ನಿಮ್ಮ ಬೆನ್ನ ಹಿಂದೆ ಗೇಲಿ, ಅವಮಾನ ಮಾಡುತ್ತಾರೆ.

ಹೆಂಡತಿಯ ಬಗ್ಗೆ : ದಾಂಪತ್ಯ ಜೀವನದಲ್ಲಿ ಏರಿಳಿತವಿರುತ್ತದೆ. ಹಾಗಾಗಿ ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಯಾರೊಂದಿಗೂ ಚರ್ಚಿಸಬಾರದು. ನಿಮ್ಮ ಹೆಂಡತಿಯ ಒಳ್ಳೆಯ ಮತ್ತು ಕೆಟ್ಟ ಗುಣಗಳನ್ನು ಯಾರಿಗೂ ಹೇಳಬಾರದು . ಇದರಿಂದ ಸಂಬಂಧದಲ್ಲಿ ಬಿರುಕು ಬಿಡುತ್ತದೆ.

Chanyaka niti: ಈ ಮೂರು ನ್ಯೂನತೆಗಳು ವೈಫಲ್ಯದ ಸಂಕೇತವಾಗಿದೆ, ಇಂದೇ ಅವುಗಳನ್ನು ನಿಮ್ಮ ಜೀವನದಿಂದ ಹೊರಹಾಕಿ….!

ಅವಮಾನಕರ ಸಂಗತಿ : ನಿಮಗೆ ಯಾರಾದರೂ ಅವಮಾನ ಮಾಡಿದರೆ , ಅಗೌರವ ನೀಡಿದರೆ, ಕೆಟ್ಟದಾಗಿ ವರ್ತಿಸಿದರೆ ಅದನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿ, ಇದರಿಂದ ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಕಡಿಮೆಯಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...