Kannada Duniya

ಈ ಜನರ ಅದೃಷ್ಟ ಹೆಚ್ಚಾಗುತ್ತದೆಯಂತೆ ಹವಳವನ್ನು ಧರಿಸುವುದರಿಂದ ….!

ರತ್ನಶಾಸ್ತ್ರದ ಪ್ರಕಾರ ಗ್ರಹಗಳು ಶುಭ ಪರಿಣಾಮವನ್ನು ಬೀರಲು ವ್ಯಕ್ತಿಯು ರತ್ನಗಳನ್ನು ಧರಿಸಬೇಕು. ಅದರಂತೆ ಹವಳವನ್ನು ಮಂಗಳ ಗ್ರಹದ ರತ್ನವೆಂದು ಪರಿಗಣಿಸಲಾಗುತ್ತದೆ.

ಜ್ಯೋತಿಷ್ಯದಲ್ಲಿ ಮಂಗಳಗ್ರಹವನ್ನು ಧೈರ್ಯ ಮತ್ತು ಉತ್ಸಾಹದ ಅಂಶವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಜಾತಕದಲ್ಲಿ ಮಂಗಳ ಗ್ರಹ ದುರ್ಬಲರಾಗಿರುವವರು ಹವಳವನ್ನು ಧರಿಸಿ ಪ್ರಯೋಜನ ಪಡೆಯಿರಿ.

ಈ ರತ್ನವು ರಾಜಕೀಯ, ನಾಯಕತ್ವ, ಆಡಳಿತ, ಸೈನ್ಯ, ಪೊಲೀಸ್, ವೈದ್ಯಕೀಯ ಕ್ಷೇತ್ರ, ಮುಂತಾದ ಕೆಲಸದ ಅಂಶವಾಗಿದೆ. ವ್ಯಕ್ತಿಗೆ ರಕ್ತಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೆ ಹವಳನ್ನು ಧರಿಸಿದರೆ ಪ್ರಯೋಜನವಾಗುತ್ತದೆ. ಇದು ದುಃಖ ಮತ್ತು ಮಾನಸಿಕ ಖಿನ್ನತೆಯನ್ನು ಹೋಗಲಾಡಿಸುತ್ತದೆ. ಇದು ಭಯವನ್ನು ನಿವಾರಿಸುತ್ತದೆ.

ಈ ರತ್ನವನ್ನು ಮೇಷ ಮತ್ತು ವೃಶ್ಚಿಕ ರಾಶಿಯವರು ಧರಿಸಬಹುದು. ಹಾಗೇ ಸಿಂಹ ರಾಶಿಯವರಿಗೂ ಇದು ಅದೃಷ್ಟವನ್ನು ತರುತ್ತದೆ. ಹಾಗಾಗಿ ಈ ರಾಶಿಯವರು ಚಿನ್ನ, ಬೆಳ್ಳಿ ಅಥವಾ ತಾಮ್ರದ ಉಂಗುರಗಳಲ್ಲಿ ಇದನ್ನು ಧರಿಸಬಹುದು. ಇದನ್ನು ಪುರುಷರು ಬಲಗೈಯ ಉಂಗುರದ ಬೆರಳಿನಲ್ಲಿ ಧರಿಸಿದರೆ ಮಹಿಳೆಯರು ಎಡಗೈಯ ಉಂಗುರದ ಬೆರಳಿನಲ್ಲಿ ಧರಿಸಿದರೆ ಒಳ್ಳೆಯದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...