Kannada Duniya

ಜಿಮ್ ಗೆ ಹೋಗುವ ಮುನ್ನ ಆಲೋಚಿಸಿ

ಲಾಕ್ ಡೌನ್ ಮುಗಿದು, ಜಿಮ್ ಗಳೆಲ್ಲಾ ಮತ್ತೆ ತೆರೆದುಕೊಂಡಿವೆ. ಈ ಸಮಯದಲ್ಲಿ ಜಿಮ್ ಗೆ ಹೋಗುವವರು ಮರೆಯದೆ ಈ ನಿಯಮಗಳನ್ನು ಪಾಲಿಸಿ.

ಲಾಕ್ ಡೌನ್ ಅವಧಿಯಲ್ಲಿ ಅಂತರ್ಜಾಲ ನೋಡಿ ಕಲಿತ ಫಿಟ್ ನೆಸ್ ತಂತ್ರಗಳನ್ನೇ ಮುಂದುವರಿಸಿ. ಸಾಧ್ಯವಾದಷ್ಟು ಮರಳಿ ಜಿಮ್ ಗೆ ಹೋಗುವ ಪ್ಲಾನ್ ಅನ್ನು ಮುಂದೆ ಹಾಕಿ.

ಮನೆಯಲ್ಲೇ ಸಿಗುವ ಸಲಕರಣೆಗಳಿಂದ ವ್ಯಾಯಾಮ ಮಾಡುವ ಬಗೆಯನ್ನು ಇಂಟರ್ ನೆಟ್ ನಲ್ಲಿ ನೋಡಿ ಕಲಿಯಿರಿ. ಆನ್ ಲೈನ್ ನಲ್ಲಿ ಉಚಿತವಾಗಿ ಸಿಗುವ ಟ್ಯುಟೋರಿಯಲ್ ಗಳನ್ನು ವೀಕ್ಷಿಸಿ.

ಹೀಗಿದ್ದೂ ಜಿಮ್ ಹೋಗುವುದು ಅನಿವಾರ್ಯ ಎನಿಸಿದರೆ ಸುರಕ್ಷಿತ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಿ. ನಿಮ್ಮ ಸಮಯಕ್ಕೆ ಸರಿಯಾಗಿ ಹೋಗಿ, ಬನ್ನಿ. ಕುಡಿಯುವ ನೀರು ನೀವೇ ಕೊಂಡೊಯ್ಯಿರಿ.

ಬಟ್ಟೆ ಬದಲಾಯಿಸುವ ಕೊಠಡಿ ಬಳಸದಿರಿ. ಮನೆಯಿಂದ ಜಿಮ್ ಗೆ ಧರಿಸುವ ಉಡುಪು ಹಾಕಿಕೊಂಡು ಬನ್ನಿ. ಚಾಪೆಯನ್ನೂ ಮನೆಯಿಂದ ತರುವುದೇ ಒಳ್ಳೆಯದು. ಪ್ರತಿಯೊಂದು ಉಪಕರಣ ಬಳಸುವ ಮುನ್ನ ಕೈಗೆ ಸ್ಯಾನಿಟೈಸರ್ ಹಾಕಿಕೊಳ್ಳುವುದನ್ನು ಮರೆಯದಿರಿ.

ಆನ್‌ಲೈನ್‌ನಲ್ಲಿ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಮತ್ತು ಆನಂದಿಸಿ !!!

Related News


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...