Kannada Duniya

ವಿಶ್ವ ಪಾರಂಪರಿಕ ಪಟ್ಟಿಗೆ ಥಾಯ್ ʼಮಸಾಜ್ʼ ಸೇರ್ಪಡೆ

ಭಾರತದ್ದೇ ಮೂಲವಾದರೂ ಥೈಲ್ಯಾಂಡ್ ನಲ್ಲಿ ಪ್ರಸಿದ್ಧಿ ಪಡೆದಿರುವ ಮಸಾಜ್ ಇದೀಗ ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸುವ ಮುಖೇನ ಇನ್ನಷ್ಟು ವ್ಯಾಪಿಸಲು ವೇದಿಕೆ ಸೃಷ್ಟಿಸಿಕೊಂಡಿದೆ.

ಥೈಲ್ಯಾಂಡ್ ನಲ್ಲಿ ದಶಕಗಳಿಂದ ಸಾಂಪ್ರದಾಯಿಕ ರೀತಿಯಲ್ಲಿ ನಡೆಸಿಕೊಂಡು ಬರುತ್ತಿರುವ ಮಸಾಜ್ ಮತ್ತಿತರ ದೈಹಿಕ ವ್ಯಾಯಾಮ ರೀತಿಯ ಕಸರತ್ತು ಇಂದು ವಿಶ್ವಾದ್ಯಂತ ಅತ್ಯಂತ ಪ್ರಸಿದ್ಧಿ ಪಡೆದಿವೆ.

ಶತಮಾನಗಳಿಂದ ಚಾಲ್ತಿಯಲ್ಲಿದ್ದರೂ 1960ರಲ್ಲಿ ಅಧಿಕೃತವಾಗಿ ಮಸಾಜ್ ಥೆರಪಿ ತರಬೇತಿ ಶಾಲೆಯನ್ನೇ ತೆರೆದು ಇದನ್ನು ವೃತ್ತಿಪರಗೊಳಿಸಲಾಗಿತ್ತು. ಇದೀಗ ಯುನೆಸ್ಕೋ ದ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಥಾಯ್ ಮಸಾಜ್ ಸ್ಥಾ‌ನ ಪಡೆಯುವ ಮೂಲಕ ಜಾಗತಿಕ ಮಟ್ಟದಲ್ಲಿ ತನ್ನ ಕೀರ್ತಿ ಹೆಚ್ಚಿಸಿಕೊಂಡಿದೆ.

ಕೊಲಂಬಿಯಾ ಬಗೋಟಾದಲ್ಲಿ ಸೇರಿದ್ದ ಯುನೆಸ್ಕೋದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆ ಅಧಿಕೃತವಾಗಿ ಥಾಯ್ ಮಸಾಜ್ ಗೆ ಜಾಗತಿಕ ಸ್ಥಾನಮಾನ ಒದಗಿಸಿಕೊಟ್ಟಿದೆ.

ನುವಾದ್ ಥಾಯ್ ಮಸಾಜ್ ಅನ್ನು ಇದೀಗ ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ವಿಸ್ತಾರಗೊಳಿಸಲು ಮತ್ತಷ್ಟು ಪುಷ್ಟಿ ಸಿಕ್ಕಿದೆ.

ಕ್ರೈರಾತ್ ಅವರ ಪ್ರಕಾರ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಥಾಯ್ ಮಸಾಜ್ ಗುರುತಿಸಲ್ಪಡುವ ಮುಖೇನ ಬಹುದಿನಗಳ ಕನಸು ನನಸಾಗಿದೆ. ಖಂಡಿತವಾಗಿ ಇದು ನಮ್ಮ ಸಾಂಸ್ಕೃತಿಕ ಮಸಾಜ್ ಮತ್ತು ಇತರ ದೈಹಿಕ ಕಸರತ್ತು ಮತ್ತು ಚಿಕಿತ್ಸಾ ವಿಧಾನಗಳು ಜಗತ್ತಿನಲ್ಲಿ ಹೆಸರು ಮಾಡಲು ಅವಕಾಶ ನೀಡುತ್ತದೆ ಎಂದಿದ್ದಾರೆ.

ಜತೆಗೆ ಬೆರಳು, ಮಂಡಿ, ಮೊಣಕಾಲು, ಪಾದ ಮತ್ತಿತರ ಭಾಗಗಳಿಗೆ ವಿಶೇಷವಾಗಿ ಚಿಕಿತ್ಸೆ ನೀಡುವ ಥಾಯ್ ವಿಧಾನ ಪ್ರಸ್ತುತ 145 ದೇಶಗಳಲ್ಲಿ ಚಾಲ್ತಿಯಲ್ಲಿದೆ. ಸುಮಾರು 2 ಲಕ್ಷ ಮಂದಿ ನುರಿತ ಥೆರಪಿಸ್ಟ್ ಗಳು ಥಾಯ್ ತರಬೇತಿ ಕೇಂದ್ರಗಳ ಮುಖೇನ ತಯಾರಾಗಿದ್ದಾರೆ. ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿ ಸೇರಿದ ಥಾಯ್ ಮಸಾಜ್ ಸಾಂಪ್ರದಾಯಿಕ ಚಿಕಿತ್ಸೆಗೆ ಇದೀಗ ಮತ್ತೊಂದು ಗರಿ‌ ಮೂಡಿದೆ.

ಆನ್‌ಲೈನ್‌ನಲ್ಲಿ ಹೆಚ್ಚಿನ ಸುದ್ದಿಗಳಿಗಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಆನಂದಿಸಿ !!!


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...