Kannada Duniya

ಹೃದಯ ರೋಗಿಗಳು ಈ ಪದಾರ್ಥಗಳನ್ನು ಸೇವಿಸಬೇಡಿ…!

ಒತ್ತಡ ಮತ್ತು ಕೆಟ್ಟ ಜೀವನಶೈಲಿಯಿಂದ ಕೆಲವರು ಹೃದಯದ ಕಾಯಿಲೆಗೆ ಒಳಗಾಗುತ್ತಾರೆ. ಹಾಗಾಗಿ ಜನರು ತಮ್ಮ ಆರೋಗ್ಯ ಮತ್ತು ಆಹಾರದ ಬಗ್ಗೆ ಕಾಳಜಿವಹಿಸಬೇಕು. ಆದಕಾರಣ ಹೃದಯದ ಕಾಯಿಲೆ ಇರುವವರು ಈ ಪದಾರ್ಥಗಳನ್ನು ಸೇವಿಸಬೇಡಿ.

ಮೊಟ್ಟೆಯ ಹಳದಿ ಭಾಗ : ಮೊಟ್ಟೆಯ ಹಳದಿ ಭಾಗದಲ್ಲಿ ಕೊಬ್ಬು ಸಮೃದ್ಧವಾಗಿದೆ. ಆದ್ದರಿಂದ ಇದು ಹೃದಯ ರೋಗಿಗಳಿಗೆ ಹಾನಿಕಾರಕವಾಗಿದೆ.

ಉಪ್ಪು :ಉಪ್ಪು ಅಡುಗೆಯಲ್ಲಿ ಪ್ರಮುಖವಾಗಿದೆ. ಇದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಆದರೆ ಹೆಚ್ಚುವರಿ ಉಪ್ಪನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮವಲ್ಲ. ಇದು ರಕ್ತದೊತ್ತಡವನ್ನು ಹೆಚ್ಚಿಸುವುದರಿಂದ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.

ದೇಹದಲ್ಲಿ ತುರಿಕೆ ಇದ್ದಾಗ ಈ ವಸ್ತುಗಳ್ನು ತಿನ್ನಬೇಡಿ….!

ಮೈದಾ ಹಿಟ್ಟು: ಹೃದಯ ರೋಗಿಗಳಿಗೆ ಮೈದಾ ಹಿಟ್ಟು ಅಪಾಯಕಾರಿಯಾಗಿದೆ. ಹೆಚ್ಚು ಸಂಸ್ಕರಿಸಿದ ಹಿಟ್ಟು ತಿನ್ನುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆ. ಇದರಿಂದ ಹೃದಯ ಸಮಸ್ಯೆ ಕಾಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...