Kannada Duniya

ಬಸಳೆ ಸೊಪ್ಪು ಸೇವನೆ ಮಾಡುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ…?

ನಿಮ್ಮ ಹಿತ್ತಲಿನಲ್ಲಿ ನೈಸರ್ಗಿಕವಾಗಿ ಹಾಗೂ ಸುಲಭವಾಗಿ ಬೆಳೆಯುವ ಬಸಳೆಯಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ? ಹಲವು ರೋಗಗಳಿಗೆ ಔಷಧವಾಗಿರುವ ಬಸಳೆ ಸೊಪ್ಪಿನಲ್ಲಿ ಪೊಟ್ಯಾಶಿಯಂ, ವಿಟಮಿನ್, ಕ್ಯಾಲ್ಸಿಯಂ ಸೇರಿದಂತೆ ಹಲವು ಬಗೆಯ ಪೋಷಕಾಂಶಗಳಿವೆ.

ಬಸಳೆ ಸೊಪ್ಪನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ರಕ್ತದೊತ್ತಡದಿಂದ ಮುಕ್ತಿ ಹೊಂದಬಹುದು. ಇದರಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಅಂಶವಿದ್ದು ಇದು ಮೂಳೆಗಳನ್ನು ಬಲಪಡಿಸುತ್ತದೆ ಹಾಗೂ ಸ್ನಾಯುಗಳಿಗೆ ಶಕ್ತಿ ತುಂಬುತ್ತದೆ.

ಬಸಳೆ ಸೊಪ್ಪಿನಲ್ಲಿ ಕಡಿಮೆ ಪ್ರಮಾಣದ ಕ್ಯಾಲರಿಗಳಿರುವುದರಿಂದ ಇದು ತೂಕ ಹೇಳಿಕೆಗೂ ಸಹಕಾರಿ. ಇದರಲ್ಲಿರುವ ಫೈಬರ್ ಅಂಶ ಜೀರ್ಣಕ್ರಿಯೆಯನ್ನು ಸುಧಾರಿಸಿ ದೇಹದ ತ್ಯಾಜ್ಯವನ್ನು ಹೊರಹಾಕಲು ನೆರವಾಗುತ್ತದೆ.

ಹೃದಯಾಘಾತ ರೋಗಿ ವ್ಯಾಯಾಮ ಮಾಡುವುದರಿಂದ ಚೇತರಿಸಿಕೊಳ್ಳಬಹುದಾ….? ತಜ್ಞರು ಹೇಳೋದೇನು…?

ಅದೇ ರೀತಿ ಬಸಳೆ ಸೊಪ್ಪಿನಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಎ ಅಂಶವಿರುವುದರಿಂದ ಇದು ದೃಷ್ಟಿ ಶಕ್ತಿಯನ್ನು ಸುಧಾರಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...