Kannada Duniya

ಖಾಲಿ ಹೊಟ್ಟೆಯಲ್ಲಿ ಸೇವಿಸಬೇಡಿ ಈ ಮಸಾಲೆ ಪದಾರ್ಥಗಳನ್ನು….!

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮಸಾಲೆ ಪದಾರ್ಥಗಳನ್ನು ಬಳಸುತ್ತಾರೆ. ಇವು ಆರೋಗ್ಯಕ್ಕೆ ಉತ್ತಮ ನಿಜ. ಆದರೆ ಅತಿಯಾಗಿ ಬಳಸಿದರೆ ಜೀರ್ಣಕ್ರಿಯೆ ಸಮಸ್ಯೆ ಕಾಡುತ್ತದೆ. ಹಾಗಾಗಿ ಈ ಮಸಾಲೆ ಪದಾರ್ಥಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಡಿ.

-ದಾಲ್ಚಿನ್ನಿ : ಔಷಧೀಯ ಗುಣಗಳಿಂದ ಕೂಡಿದ ದಾಲ್ಚಿನ್ನಿ ಅನೇಕ ರೋಗಗಳನ್ನು ನಿವಾರಿಸುತ್ತದೆ. ಆದರೆ ಇದನ್ನು ಅತಿಯಾಗಿ ಸೇವಿಸಿದರೆ, ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಲಿವರ್ ಗೆ ಹಾನಿಯಾಗುತ್ತದೆ. ಮತ್ತು ಬಾಯಿಯ ಹುಣ್ಣು, ಬಿಳಿ ಕಲೆಗಳು , ಬಾಯಿಯ ಒಳಗೆ ತುರಿಕೆ ಉಂಟಾಗುತ್ತದೆ.

-ಕರಿಮೆಣಸು : ಇದು ಕೆಮ್ಮು, ಶೀತ, ಕಫಕ್ಕೆ ಉತ್ತಮ ಮನೆಮದ್ದಾಗಿದೆ. ಆದರೆ ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಕರುಳಿಗೆ ಸಮಸ್ಯೆಯಾಗುತ್ತದೆ. ಚರ್ಮದ ಮೇಲೆ ಅಲರ್ಜಿ ಉಂಟಾಗುತ್ತದೆ.

-ಕೆಂಪು ಮೆಣಸು : ಕೆಂಪು ಮೆಣಸನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಹೊಟ್ಟೆ ಉರಿ, ಹೊಟ್ಟೆಯ ಕಿರಿಕಿರಿ ಉಂಟಾಗುತ್ತದೆ.

ಅದ್ಭುತವಾದ ಪ್ರಕೃತಿ ಸೌಂದರ್ಯ ಸವಿಯಲು ಹೆಬ್ಬೆ ಫಾಲ್ಸ್ ಗೆ ಭೇಟಿ ನೀಡಿ….!

-ಮೆಂತ್ಯಕಾಳು : ಮೆಂತ್ಯವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಉಸಿರಾಟದ ಸಮಸ್ಯೆ ಕಾಡುತ್ತದೆ. ಹೊಟ್ಟೆಯ ಕೆಳಗೆ ನೋವು ಶುರುವಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...