Kannada Duniya

ಈ ಪೈಕಿ ನಿಮ್ಮ ಇಷ್ಟದ ಪ್ಯಾಂಟ್ ಯಾವುದು….?

ಮಹಿಳೆಯರ ಪ್ಯಾಂಟ್ ಗಳ ಪೈಕಿ ಏಳು ಶೈಲಿಗಳನ್ನು ಈ ಬಾರಿಯ ಬೆಸ್ಟ್ ಪ್ಯಾಂಟ್ ಗಳೆಂದು ಗುರುತಿಸಲಾಗಿದೆ. ಅವುಗಳು ಯಾವುವು ಎಂದಿರಾ?

 

ಜೋಗರ್ ಪ್ಯಾಂಟ್ ಗೆ ಈಗ ಹೆಚ್ಚಿನ ಬೇಡಿಕೆ ಬಂದಿದೆ. ಧರಿಸಲು ಸುಲಭವಾದ ಹಾಗೂ ಸ್ಟ್ರೆಚ್ಚೇಬಲ್ ಗುಣ ಹೊಂದಿದೆ. ಹಿಂದೆ ವ್ಯಾಯಾಮ ಮಾಡುವ ವೇಳೆ ಮಾತ್ರ ಬಳಸಲಾಗುತ್ತಿದ್ದ ಈ ಪ್ಯಾಂಟ್ ಅನ್ನು ಈಗ ಫ್ಯಾಶನ್ ಆಗಿಯೂ ಧರಿಸಲಾಗುತ್ತಿದೆ. ಇದಕ್ಕೆ ವಿಭಿನ್ನ ಶೈಲಿಯ ಶೂ, ಬೂಟ್ಸ್ ಗಳನ್ನೂ ಆಯ್ಕೆ ಮಾಡಿಕೊಳ್ಳಬಹುದು.

 

 

 

 

 

ಸೇಲರ್ ಪ್ಯಾಂಟ್ ಗಳು ಕೂಡಾ ಇಂದಿನ ಟ್ರೆಂಡಿಂಗ್ ನಲ್ಲಿವೆ. ಅಗಲ ಕಾಲಿನ ಈ ಪ್ಯಾಂಟ್ ಗಳು ತುಸು ದಪ್ಪಗಿರುವವರಿಗೆ ಆಕರ್ಷಕವಾಗಿ ಕಾಣಿಸುತ್ತದೆ. ಕಾಲಿನ ಗಂಟುಗಳಿಂದ ತುಸು ಮೇಲೆಯೇ ನಿಲ್ಲುವ ಇದು ಹೈ ಹೀಲ್ಸ್ ಗಳಿಗೆ ಆಕರ್ಷಕವಾಗಿ ಕಾಣುತ್ತದೆ.

 

 

 

ಹೈ ವೇಸ್ಟ್ ವೈಡ್ ಲೆಗ್ಡ್ ಪ್ಯಾಂಟ್ ಗಳು ಸೊಂಟಕ್ಕೂ ಮೇಲ್ಭಾಗದಲ್ಲಿ ಅಂದರೆ ಹೊಟ್ಟೆಯ ಭಾಗದಲ್ಲಿ ನಿಲ್ಲುತ್ತದೆ. ಶಾರ್ಟ್ ಟಾಪ್ ಗಳಿಗೆ ಇದು ಉತ್ತಮವಾಗಿ ಹೊಂದಿಕೆಯಾಗುತ್ತದೆ. ಫಾರ್ಮಲ್ ಹಾಗೂ ಇನ್ ಫಾರ್ಮಲ್ ಫಂಕ್ಷನ್ ಗಳಿಗೆ ಇದು ಅತ್ಯುತ್ತಮ ಆಯ್ಕೆಯೂ ಹೌದು.

 

ನೀವು ಮೇಕಪ್ ಅನ್ನು ತುಂಬಾ ಇಷ್ಟಪಡುತ್ತಿದ್ದರೆ ಲಿಪ್ ಸ್ಟಿಕ್ ಅನ್ನು ಈ ರೀತಿಯಲ್ಲಿ ಬಳಸಿ

ಹರೇಮ್ ಪ್ಯಾಂಟ್ಸ್, ಬೆಲ್ ಬಾಟಮ್ ಪ್ಯಾಂಟ್ ಗಳು ಇಂದಿಗೂ ಮಾರುಕಟ್ಟೆಯಲ್ಲಿ ಬೇಡಿಕೆ ಉಳಿಸಿಕೊಂಡಿವೆ. ಇವು ನಿಮ್ಮ ದೇಹದ ಭಾಗಗಳನ್ನು ಆಕರ್ಷಕವಾಗಿ ಕಾಣುವಂತೆಯೂ ಮಾಡುತ್ತದೆ. ಕಚೇರಿಗೆ ತೊಡಲು ಆರಾಮದಾಯಕ ಎನಿಸುವ ಲೆಗ್ಗಿಂಗ್ ಪ್ಯಾಂಟ್ ಗಳು ಕೂಡಾ ಸದಾ ಫ್ಯಾಶನೇಟ್ ಆಗಿಯೇ ಉಳಿದುಕೊಂಡಿದೆ.

 

Latest trends in pants for women


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...