Kannada Duniya

Cinnamon for blood sugar control:ದಾಲ್ಚಿನ್ನಿ ಬಳಸಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಿ…!

ದಾಲ್ಚಿನ್ನಿ ಒಂದು ಮಸಾಲೆ ವಸ್ತುವಾಗಿದೆ. ಇದು ಔಷಧೀಯ ಗುಣಗಳನ್ನು ಹೊಂದಿದ್ದು, ಹಲವು ರೋಗಗಳನ್ನು ನಿವಾರಿಸುವುದರಿಂದ ಇದನ್ನು ಆಯುರ್ವೇದದಲ್ಲಿ ಬಳಸಲಾಗುತ್ತದೆ. ಇದು ಮಧುಮೇಹಕ್ಕೆ ರಾಮಬಾಣವಾಗಿದೆ. ಹಾಗಾದ್ರೆ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ದಾಲ್ಚಿನ್ನಿಯನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿದುಕೊಳ್ಳಿ.

-ದಾಲ್ಚಿನ್ನಿಯಿಂದ ಚಹಾ ತಯಾರಿಸಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಇದರಲ್ಲಿ ಉರಿಯೂತದ ಗುಣಗಳಿರುವ ಕಾರಣ ಟೈಪ್ 2 ಡಯಾಬಿಟಿಸ್ ಮತ್ತು ಇನ್ಸುಲಿನ್ ಪ್ರತಿರೋಧದಲ್ಲಿ ಇದು ಪ್ರಯೋಜನಕಾರಿಯಾಗಿದೆ. ಹಾಗಾಗಿ ಚಹಾ ತಯಾರಿಸುವಾಗ ದಾಲ್ಚಿನ್ನಿ ಸೇರಿಸಿ ಕುದಿಸಿ ಚಹಾ ತಯಾರಿಸಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಕುಡಿಯಿರಿ.

Coriander leaves benefit: ಕೊತ್ತಂಬರಿ ಸೊಪ್ಪು ಸೇವಿಸುವುದರಿಂದ ಆಗುವ ಲಾಭವೇನು ಗೊತ್ತಾ…?

-ನೀವು ಮಧುಮೇಹಿಗಳಾಗಿದ್ದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ದಾಲ್ಚಿನ್ನಿಯ ನೀರನ್ನು ಸೇವಿಸಿ. 3 ಚಮಚ ದಾಲ್ಚಿನ್ನಿ ಪುಡಿಗೆ 1 ಲೀಟರ್ ನೀರು ಸೇರಿಸಿ 20 ನಿಮಿಷಗಳ ಕಾಲ ಕುದಿಸಿ ದಿನವಿಡಿ ಸೇವಿಸಿ . ಇದು ರಕ್ತದಲ್ಲಿನ ಸಕ್ಕರೆ ಮಟ್ಟನ್ನು ಬಹಳ ಬೇಗ ಕಡಿಮೆ ಮಾಡುತ್ತದೆ.

Use Cinnamon to control blood sugar level


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...