ಆರು ತಿಂಗಳ ಬಳಿಕ ಮಕ್ಕಳಿಗೆ ಎದೆ ಹಾಲಿನ ಹೊರತಾಗಿ ಇತರ ಆಹಾರಗಳನ್ನು ನೀಡಲು ಆರಂಭಿಸುತ್ತಾರೆ. ಆದರೆ ಮೂರು ವರ್ಷದ ತನಕ ಮಕ್ಕಳಿಗೆ ಆಹಾರ ನೀಡುವಾಗ ತೀವ್ರ ಎಚ್ಚರ ವಹಿಸಬೇಕು. ನೀವು ನೀಡುವ ಆಹಾರ ಅವರಿಗೆ ಜೀರ್ಣದ ಸಮಸ್ಯೆಯನ್ನು ತಂದೊಡ್ಡಬಹುದು.
ಎರಡರಿಂದ ಮೂರು ವರ್ಷದ ತನಕ ಮಕ್ಕಳಿಗೆ ಸಂಸ್ಕರಿಸಿದ ಸಕ್ಕರೆಯನ್ನು ನೀಡಲೇಬಾರದು. ಇದರಿಂದ ಮಕ್ಕಳಿಗೆ ಹೆಚ್ಚುವರಿ ಕ್ಯಾಲರಿ ದೊರೆಯುತ್ತದೆ ಹಾಗೂ ಅವರ ಬೆಳವಣಿಗೆಗೆ ಮಾರಕವಾಗುತ್ತದೆ.
ಒಂದು ವರ್ಷದೊಳಗಿನ ಮಗುವಿಗೆ ಜೇನುತುಪ್ಪ ನೀಡುವುದು ಕೂಡ ಒಳ್ಳೆಯದಲ್ಲ. ಇದರಲ್ಲಿ ಸಾಕಷ್ಟು ಪ್ರಮಾಣದ ಆಂಟಿ ಆಕ್ಸಿಡೆಂಟ್ ಗಳಿವೆ, ಇದು ಕೆಮ್ಮು ಹಾಗೂ ಶೀತದ ನಿವಾರಣೆಗೆ ಒಳ್ಳೆಯದು ಎಂಬುದೇನೋ ನಿಜ ಆದರೆ ಮಕ್ಕಳಿಗೆ ಇದನ್ನು ನೀಡದಿರುವುದು ಒಳ್ಳೆಯದು.
ಉಪ್ಪು ಹೆಚ್ಚಾಗಿ ಬೆರೆಸಿದ ಚಿಪ್ಸ್ ಅಥವಾ ಫ್ರೆಂಚ್ ಫ್ರೈಸ್ ಗಳಂತಹ ಎಣ್ಣೆಯಲ್ಲಿ ಕರಿದ ಹಾಗೂ ಉಪ್ಪು ಮಿಶ್ರಿತ ಆಹಾರಗಳನ್ನು ಮೂರು ವರ್ಷದ ತನಕ ಮಕ್ಕಳಿಗೆ ಕೊಡದಿರುವುದು ಒಳ್ಳೆಯದು. ಇದರಿಂದ ಕಿಡ್ನಿಯ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ.
12 ತಿಂಗಳ ತನಕ ಮಗುವಿಗೆ ಹಸುವಿನ ಹಾಲನ್ನು ನೀಡಬೇಕಿಲ್ಲ, ತಾಯಿಯ ಎದೆಯ ಹಾಲು ಸಾಕು. ಅದೇ ರೀತಿ ಚೀಸ್, ಪನ್ನೀರ್ ಮೊದಲಾದ ಆಹಾರಗಳನ್ನು ಒಂದು ವರ್ಷದೊಳಗಿನ ಮಕ್ಕಳಿಗೆ ನೀಡುವುದು ಒಳ್ಳೆಯದಲ್ಲ.
ಆಯುರ್ವೇದವನ್ನು ಹಳೆಯ ಆರೋಗ್ಯ ವಿಜ್ಞಾನವೆಂದು ಪರಿಗಣಿಸಲಾಗಿದೆ. ಈಗ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಇದನ್ನು ನಂಬುವವರು ಹೆಚ್ಚಾಗುತ್ತಿದ್ದಾರೆ. ಲೈಂಗಿಕತೆಯು ಜೀವನದ ಪ್ರಮುಖ…
ಯಾವುದೇ ಸಂಬಂಧವು ನಡೆಯಲು ಪರಸ್ಪರ ತಿಳವಳಿಕೆ ಬಹಳ ಮುಖ್ಯ. ಕೆಲವೊಮ್ಮೆ ಸಣ್ಣ ವಿಚಾರಗಳಿಗೆ ಸಂಬಂಧ ಮುರಿಯುತ್ತದೆ. ಸಂಬಂಧದಲ್ಲಿ ಜಗಳ ಬರುವುದು…
ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನಶೈಲಿಯಿಂದ ಅನೇಕ ಜನರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಂತೆ, ಆತಂಕದಿಂದ ಕೆಲವರು ರಾತ್ರಿ ಸರಿಯಾಗಿ ನಿದ್ರೆ…
ಇಂದಿನ ಸಮಯದಲ್ಲಿ ಮಹಿಳೆಯರು ತಮ್ಮ ಅನಗತ್ಯ ಗರ್ಭಧಾರಣೆಯನ್ನು ತಪ್ಪಿಸಲು ವಿವಿಧ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು. ಮಾತ್ರೆಗಳು, ಕಾಪರ್ ಟೀ, ಚುಚ್ಚುಮದ್ದು ಹಲವು…
ಚಿಕ್ಕಮಕ್ಕಳು ತಿನ್ನಲು ಇಷ್ಟಪಡುವುದಿಲ್ಲ. ಅವರಿಗೆ ಹಸಿವಾಗದಿರುವುದೇ ಇದಕ್ಕೆ ಕಾರಣ. ಅವರು ಸರಿಯಾಗಿ ಆಹಾರ ಸೇವಿಸದಿದ್ದರೆ ಅವರಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾಗಿ…
ಹವಾಮಾನ ಬದಲಾದಂತೆ ನಮ್ಮ ದಿನಚರಿಗಳನ್ನು ಬದಲಿಸುವುದು ಅವಶ್ಯಕ. ಇದರಲ್ಲಿ ಆಹಾರ ಕ್ರಮ ಕೂಡ ಒಂದು. ಹಾಗಾಗಿ ಈಗಾಗಲೇ ಚಳಿಗಾಲ ಮುಗಿದು…