ಗೆಲುವು ಸಣ್ಣದೇ ಆಗಿರಲಿ, ದೊಡ್ಡದೇ ಆಗಿರಲಿ, ಅದನ್ನು ಸಂಭ್ರಮಿಸಲು ಕಲಿತಾಗ ಬದುಕು ಸುಂದರವಾಗುತ್ತದೆ. ಹುಟ್ಟಿದ ಹಬ್ಬ, ಮದುವೆ ದಿನ, ಇತರ ಕಾರ್ಯಕ್ರಮಗಳ ಹೊರತಾಗಿಯೂ ಸಣ್ಣ ಪುಟ್ಟ ಖುಷಿಯನ್ನು ಹಂಚಿಕೊಳ್ಳುವುದರಿಂದ, ಸೆಲೆಬ್ರೇಟ್ ಮಾಡುವುದರಿಂದ ಯಾವೆಲ್ಲ ಲಾಭಗಳಿವೆ ತಿಳಿಯೋಣ.
ಸೆಲೆಬ್ರೇಶನ್ ಮಾಡುವುದರಿಂದ ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ನೀವು ಮನೆಯಿಂದ ದೂರವಿದ್ದರೂ ವಾರಾಂತ್ಯಗಳಲ್ಲಿ ಮನೆಗೆ ಹಿಂದಿರುಗಿ ಮನೆಮಂದಿಯೊಂದಿಗೆ ಸೆಲೆಬ್ರೇಶನ್ ಮಾಡುವುದರಿಂದ ಅವರ ಹಾಗೂ ನಿಮ್ಮ ನಡುವಿನ ಅಂತರ ಕಡಿಮೆಯಾಗುತ್ತದೆ.
ನಿಮ್ಮ ಮಧ್ಯೆ ಅಂಡರ್ ಸ್ಟ್ಯಾಂಡಿಂಗ್ ಬೆಳೆಯುತ್ತದೆ. ತಂದೆ ತಾಯಿ, ಅಕ್ಕ ತಂಗಿ, ಅಣ್ಣ ತಮ್ಮ, ಗೆಳೆಯರು ಹೀಗೆ ಪ್ರತಿಯೊಬ್ಬರೂ ನಮ್ಮ ಜೀವನದಲ್ಲಿ ಎಷ್ಟು ಮುಖ್ಯ ಎಂಬುದರ ಅರಿವಾಗುತ್ತದೆ.
ಒಂಟಿತನ ದೂರವಾಗುತ್ತದೆ. ಖಿನ್ನತೆ ಅಥವಾ ಆತಂಕದಂತಹ ಸಮಸ್ಯೆಗಳು ನಿಮ್ಮಹತ್ತಿರಕ್ಕೂ ಸುಳಿಯುವುದಿಲ್ಲ. ಇದು ಎಲ್ಲರ ಮನಸ್ಸಿಗೆ ಖುಷಿ ತರುತ್ತದೆ. ಆಗ ಮನಸ್ಸು ಶಾಂತಸ್ಥಿತಿಗೆ ಬಂದು ಸಕಾರಾತ್ಮಕವಾಗಿ ಯೋಚಿಸಲು ಆರಂಭಿಸುತ್ತದೆ.
ಆಯುರ್ವೇದವನ್ನು ಹಳೆಯ ಆರೋಗ್ಯ ವಿಜ್ಞಾನವೆಂದು ಪರಿಗಣಿಸಲಾಗಿದೆ. ಈಗ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಇದನ್ನು ನಂಬುವವರು ಹೆಚ್ಚಾಗುತ್ತಿದ್ದಾರೆ. ಲೈಂಗಿಕತೆಯು ಜೀವನದ ಪ್ರಮುಖ…
ಯಾವುದೇ ಸಂಬಂಧವು ನಡೆಯಲು ಪರಸ್ಪರ ತಿಳವಳಿಕೆ ಬಹಳ ಮುಖ್ಯ. ಕೆಲವೊಮ್ಮೆ ಸಣ್ಣ ವಿಚಾರಗಳಿಗೆ ಸಂಬಂಧ ಮುರಿಯುತ್ತದೆ. ಸಂಬಂಧದಲ್ಲಿ ಜಗಳ ಬರುವುದು…
ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನಶೈಲಿಯಿಂದ ಅನೇಕ ಜನರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಂತೆ, ಆತಂಕದಿಂದ ಕೆಲವರು ರಾತ್ರಿ ಸರಿಯಾಗಿ ನಿದ್ರೆ…
ಇಂದಿನ ಸಮಯದಲ್ಲಿ ಮಹಿಳೆಯರು ತಮ್ಮ ಅನಗತ್ಯ ಗರ್ಭಧಾರಣೆಯನ್ನು ತಪ್ಪಿಸಲು ವಿವಿಧ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು. ಮಾತ್ರೆಗಳು, ಕಾಪರ್ ಟೀ, ಚುಚ್ಚುಮದ್ದು ಹಲವು…
ಚಿಕ್ಕಮಕ್ಕಳು ತಿನ್ನಲು ಇಷ್ಟಪಡುವುದಿಲ್ಲ. ಅವರಿಗೆ ಹಸಿವಾಗದಿರುವುದೇ ಇದಕ್ಕೆ ಕಾರಣ. ಅವರು ಸರಿಯಾಗಿ ಆಹಾರ ಸೇವಿಸದಿದ್ದರೆ ಅವರಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾಗಿ…
ಹವಾಮಾನ ಬದಲಾದಂತೆ ನಮ್ಮ ದಿನಚರಿಗಳನ್ನು ಬದಲಿಸುವುದು ಅವಶ್ಯಕ. ಇದರಲ್ಲಿ ಆಹಾರ ಕ್ರಮ ಕೂಡ ಒಂದು. ಹಾಗಾಗಿ ಈಗಾಗಲೇ ಚಳಿಗಾಲ ಮುಗಿದು…