Kannada Duniya

ಮಕ್ಕಳಿಗೆ ಹೆಸರಿಡಲು ಇಲ್ಲಿವೆ ನೋಡಿ ಕೆಲವು ಟಿಪ್ಸ್…!

ಮನೆಯಲ್ಲಿ ಮಕ್ಕಳು ಹುಟ್ಟಿದ ಸಂಭ್ರಮದೊಂದಿಗೆ ಯಾವ ಹೆಸರು ಇಡುವುದು ಎಂಬ ಚರ್ಚೆಯೂ ಆರಂಭವಾಗುತ್ತದೆ. ಆದರೆ ಹೆಸರಿಡುವ ಮುನ್ನ ನೀವು ಈ ಕೆಲವು ಸಂಗತಿಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಮುಖ್ಯ ಅವುಗಳು ಯಾವುವು ಎಂದರೆ?

ನಕ್ಷತ್ರಗಳನ್ನು ನೋಡಿ ಹೆಸರಿಡುವವರು ಅದರ ಆಧಾರದ ಮೇಲೆ ಯಾವ ಅಕ್ಷರವನ್ನು ಬಳಸಬಹುದೇ ಅದನ್ನೇ ಆಯ್ಕೆ ಮಾಡಿ. ಅದರಲ್ಲಿ ನಂಬಿಕೆ ಇಲ್ಲ ಎನ್ನುವವರು ಹೊಸ ಹೆಸರನ್ನು ಇಡುವ ಮುನ್ನ ಅದರ ಅರ್ಥ ತಿಳಿದುಕೊಳ್ಳಲು ಮರೆಯದಿರಿ.

ಮಗು ಬೆಳೆದು ದೊಡ್ಡವನಾದ ಮೇಲೆ ಸಮಾಜ ಮಗುವನ್ನು ಅದೇ ಹೆಸರಿನಿಂದ ಕರೆಯುತ್ತದೆ ಹಾಗೂ ಗುರುತಿಸಿಕೊಳ್ಳುತ್ತದೆ. ಇಂಥ ಸಂದರ್ಭದಲ್ಲಿ ಮಗುವಿಗೆ ಮುಜುಗರವಾಗುವಂಥ ಹೆಸರನ್ನು ಆಯ್ಕೆ ಮಾಡದಿರಿ. ಹೆಚ್ಚು ಒತ್ತಕ್ಷರಗಳಿರುವ ಹೆಸರಾದರೆ ಶಾಲೆಯಲ್ಲಿ ಮಗುವಿನ ಹೆಸರು ಕರೆಯುವಾಗ ಅಪಾರ್ಥಗಳಾಗಬಹುದು.

ಹಾಗಾಗಿ ನೀವು ಮಗುವಿಗೆ ಇಡುವ ಹೆಸರು ಸರಳವಾಗಿರಲಿ. ಶಾರ್ಟ್ ಅಗಿ ಕರೆಯಬೇಕು ಎಂದುಕೊಂಡಿದ್ದರೆ ಸಣ್ಣ ಹೆಸರನ್ನೇ ಇಡಿ. ಉದ್ದನೆಯ ಹೆಸರಿಟ್ಟು ಎರಡಕ್ಷರವನ್ನು ಮಾತ್ರ ಕರೆದು ಹೆಸರನ್ನು ಹಾಳು ಮಾಡದಿರಿ. ಅದರ ಬದಲು ಸಣ್ಣ ಹೆಸರನ್ನೇ ಇಟ್ಟು ಪೂರ್ತಿ ಹೆಸರಿನಿಂದ ಕರೆಯಿರಿ.

ಕನಸಿನಲ್ಲಿ ಶನಿದೇವರು ಮತ್ತು ಶನಿ ದೇವಾಲಯವನ್ನು ನೋಡುವುದು ಶುಭವೇ? ಅಶುಭವೇ?

ದೇವ-ದೇವತೆಯರ ಹೆಸರು ಇಡುತ್ತೀರಾದರೆ ಮೊದಲೇ ತಜ್ಞರ ಅಭಿಪ್ರಾಯ ಪಡೆದುಕೊಳ್ಳಿ. ಹೆಸರು ಅಪಾರ್ಥವಾಗದಂತೆ ಎಚ್ಚರವಹಿಸಿ. ಇನ್ನು ಗಂಡು-ಹೆಣ್ಣು ಇಬ್ಬರಿಗೂ ಇಡುವ ಹೆಸರುಗಳನ್ನು ಅವಾಯ್ಡ್ ಮಾಡಿ. ಹೆತ್ತವರ ಹೆಸರು ಬರಬೇಕೆಂದು ಮಗುವಿನ ಹೆಸರು ಹಾಳು ಮಾಡದಿರಿ. ಇನಿಷಿಯಲ್ ಸೇರಿಸುವುದಿದ್ದರೆ ಬರ್ತ್ ಸರ್ಟಿಫಿಕೇಟ್ ಮಾಡುವ ವೇಳೆಯೇ ಸೇರಿಸಿಡಿ.

Related News


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...