Kannada Duniya

ಮುಖ್ಯವಾದ ಕೆಲಸಕ್ಕೆ ಹೋಗುವಾಗ ನೀವು ಈ ಮಾತು ಕೇಳಿದರೆ ನಿಮ್ಮ ಕೆಲಸ ಆಗುತ್ತದೆ….!

ಜ್ಯೋತಿಷ್ಯಶಾಸ್ತ್ರದಲ್ಲಿ ಭವಿಷ್ಯದ ಬಗ್ಗೆ ಶುಭ ಮತ್ತು ಅಶುಭ ಚಿಹ್ನೆಗಳನ್ನು ನೀಡುವ ಅನೇಕ ವಿಷಯಗಳಿವೆ. ಶಕುನ ಶಾಸ್ತ್ರದ ಪ್ರಕಾರ ಅನೇಕ ಘಟನೆಗಳನ್ನು ಶುಭ ಅಥವಾ ಅಶುಭವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ನೀವು ಮುಖ್ಯವಾದ ಕೆಲಸಕ್ಕೆಂದು ಹೊರಗಡೆ ಹೋಗುವಾಗ ಈ ಮಾತನ್ನು ಕೇಳಿದರೆ ನಿಮ್ಮ ಕೆಲಸ ಖಂಡಿತ ಆಗುತ್ತದೆಯಂತೆ.

ನೀವು ಹೊರಗಡೆ ಮುಖ್ಯವಾದ ಕೆಲಸಕ್ಕೆಂದು ಹೋಗುವಾಗ ಸಕರಾತ್ಮಕ ಮಾತುಗಳು ಕೇಳಿಬಂದರೆ ಅದರಿಂದ ಮಂಗಳಕರವಾಗಲಿದೆ.

ಹಾಗೇ ಸಣ್ಣ ಧ್ವನಿಯ ಶಬ್ದ ಕೇಳಿಬಂದರೆ ಅದರಿಂದ ಒಳಿತಾಗುತ್ತದೆ. ಆದರೆ ಕರ್ಕಶ ಅಥವಾ ಕೂಗಾಡುವಂತಹ ಶಬ್ದ ಕೇಳಿ ಬಂದರೆ ಅದರಿಂದ ಅಶುಭವಾಗುತ್ತದೆಯಂತೆ.

Chanakya Niti: ಈ ಕಾರ್ಯಗಳನ್ನು ಮಾಡಿದರೆ ನಿಮ್ಮ ಗೌರವ ಹಾಳಾಗುತ್ತದೆ….!

ಒಬ್ಬ ವ್ಯಕ್ತಿ ಮುಖ್ಯವಾದ ಕೆಲಸಕ್ಕೆಂದು ಹೊರಗಡೆ ಹೋಗುವಾಗ ನೀರು ತುಂಬಿದ ಪಾತ್ರೆ ಕಾಣಿಸಿಕೊಂಡರೆ, ಅದರಿಂದ ಮಂಗಳಕರವಾಗುತ್ತದೆ.

ಮನೆಗೆ ಅತಿಥಿಗಳು ಆಗಮಿಸಿದರೆ ಅದರಿಂದ ಶುಭವಾಗುತ್ತದೆ. ಹಾಗೇ ಕೆಲಸಕ್ಕೆ ಹೋಗುವಾಗ ಗೂಳಿ, ಕುದುರೆ, ಪಕ್ಷಿ ಅಥವಾ ಆನೆ ಕಂಡುಬಂದರೆ ಅದರಿಂದ ಶುಭ ಫಲಿತಾಂಶ ಸಿಗುತ್ತದೆ.

 

Related News


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...