Kannada Duniya

ನಿಮಗೆ ದಿನವಿಡೀ ಸುಸ್ತಾಗಲು ಈ ಅಭ್ಯಾಸಗಳೇ ಕಾರಣವಂತೆ…!

 

ನಿಮ್ಮ ದೇಹ ಶಕ್ತಿಯುತವಾಗಿದ್ದರೆ ನಿಮಗೆ ಯಾವುದೇ ಕೆಲಸ ಮಾಡಲು ಕಷ್ಟವಾಗುವುದಿಲ್ಲ. ಆದರೆ ಕೆಲವರು ದಿನವಿಡೀ ಸುಸ್ತಿನಿಂದ ಬಳಲುತ್ತಾರೆ. ಇದರಿಂದ ಅವರಿಗೆ ಕೆಲಸ ಮಾಡಲು ಕಷ್ಟವಾಗುತ್ತದೆ. ಹಾಗಾಗಿ ನಿಮಗೆ ಈ ಸಮಸ್ಯೆ ಉಂಟಾಗಲು ಕಾರಣವೇನು ಎಂಬುದನ್ನು ತಿಳಿದುಕೊಳ್ಳಿ.

ನೀವು ನಿಯಮಿತವಾಗಿ ವ್ಯಾಯಾಮ ಮಾಡದಿದ್ದಾಗ ನಿಮಗೆ ಸುಸ್ತು ಸಮಸ್ಯೆ ಕಾಡುತ್ತದೆ. ದಿನಕ್ಕೆ ಸಾಕಷ್ಟು ನೀರು ಕುಡಿಯಬೇಕು. ನೀವು ಕಡಿಮೆ ನೀರು ಕುಡಿದರೆ ಈ ಸಮಸ್ಯೆ ಹೆಚ್ಚಾಗುತ್ತದೆ. ನೀವು ಯಾವುದೇ ವಿಚಾರಕ್ಕೆ ಆಗಾಗ ಭಯ ಪಡುತ್ತಿದ್ದರೆ ನಿಮ್ಮ ದೇಹ ಆಯಾಸಗೊಳ್ಳುತ್ತದೆ.

ಪದೇ ಪದೇ ನಿಮ್ಮ ಆರೋಗ್ಯ ಕೈ ಕೊಡ್ತಾ ಇದಿಯಾ…ಇದನ್ನು ಓದಿ…!

ನೀವು ಬೆಳಿಗ್ಗಿನ ಉಪಹಾರ ಸೇವಿಸದಿದ್ದಾಗ ನಿಮ್ಮ ದೇಹ ಶಕ್ತಿಹೀನವಾಗುತ್ತದೆ. ಹಾಗೇ ಅತಿಯಾಗಿ ಆಹಾರವನ್ನು ಸೇವನೆ ಮಾಡಿದರೆ ಮತ್ತು ಮಸಾಲೆಯುಕ್ತ ಆಹಾರ ಸೇವನೆ ಮಾಡಿದರೆ ದೇಹ ಸುಸ್ತಾಗುತ್ತದೆ. ರಾತ್ರಿ ಕಡಿಮೆ ನಿದ್ರೆ, ಮದ್ಯಪಾನ, ಧೂಮಪಾನ ಸೇವನೆ ನಿಮ್ಮ ದೇಹವನ್ನು ಬಲಹೀನಗೊಳಿಸುತ್ತದೆ.

 

Related News


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...