ನೀವೂ ಸೀರೆ ಉಡುವವರಾಗಿದ್ದರೆ ಈ ಬಗ್ಗೆ ಗಮನವಿರಲಿ…!

ನಾರಿಯ ಅಂದವನ್ನು ಸೀರೆ ದುಪ್ಪಟ್ಟು ಮಾಡುತ್ತೆ. ಅನೇಕ ಮಹಿಳೆಯರು ಸೀರೆಯನ್ನು ಬಹಳ ಇಷ್ಟ ಪಡ್ತಾರೆ. ಯಾವುದೇ ವಿಶೇಷ ಸಮಾರಂಭವಿದ್ರೂ ಸೀರೆ ಉಟ್ಟು ಬರ್ತಾರೆ. ಸುಮ್ಮನೆ ಚೆಂದದ ಸೀರೆ ಉಟ್ಟರೆ ಆಗಲಿಲ್ಲ. ಅದಕ್ಕೆ ಸರಿ ಹೊಂದುವ ಬ್ಲೌಸ್, ಲಂಗ, ಆಭರಣ, ಚಪ್ಪಲಿ ಎಲ್ಲವೂ ಮಹತ್ವ ಪಡೆಯುತ್ತದೆ.

ಮದುವೆ ಸಮಾರಂಭಗಳಲ್ಲಿ ದುಬಾರಿ ಬೆಲೆಯ ಸೀರೆ ಉಡುವ ಮಹಿಳೆಯರು ಮನೆಯಲ್ಲಿದ್ದ ಎಲ್ಲ ಆಭರಣಗಳನ್ನೂ ಹಾಕಿಕೊಳ್ತಾರೆ. ಇದು ಅವರ ಲುಕ್ ಹಾಳು ಮಾಡುತ್ತೆ. ಬಂಗಾರದಂಗಡಿ ಮನೆಗೆ ಬಂದಂತೆ ಕಾಣುತ್ತದೆಯೇ ವಿನಃ ಮಹಿಳೆ ಸುಂದರವಾಗಿ ಕಾಣೋದಿಲ್ಲ.

ಬೇರೆ ಬೇರೆ ಸ್ಟೈಲ್ ನಲ್ಲಿ ಸೀರೆಯನ್ನು ಉಡಬಹುದು. ಆದ್ರೆ ಅದ್ರಲ್ಲಿ ಯಾವ ಸ್ಟೈಲ್ ನಿಮ್ಮನ್ನು ಆಕರ್ಷಕವಾಗಿ ಮಾಡುತ್ತದೆಯೋ ಅದೇ ಸ್ಟೈಲ್ ನಲ್ಲಿ ಸೀರೆ ಉಟ್ಟುಕೊಳ್ಳಿ. ಸೊಂಟಕ್ಕಿಂತ ತುಂಬಾ ಮೇಲೆ ಅಥವಾ ತುಂಬಾ ಕೆಳಗೆ ಇರೋದು ಬೇಡ. ತೆಳ್ಳಗೆ ಬೆಳ್ಳಗೆ ಇರೋರು ಹೊಕ್ಕಳ ಕೆಳಗೆ ಸೀರೆ ಉಟ್ಟರೆ ಒಳ್ಳೆಯದು. ಹಾಗಂತ ದಪ್ಪಗಿರುವವರು ಹೀಗೆ ಮಾಡಿದ್ರೆ ಹೊಟ್ಟೆ ಮತ್ತಷ್ಟು ದೊಡ್ಡದಾಗಿ ಕಾಣುತ್ತದೆ.

ಕೆಲ ಮಹಿಳೆಯರು ಸೀರೆ ಜೊತೆ ಹಳೆಯ ಅಥವಾ ದೊಡ್ಡ ಹ್ಯಾಂಡ್ ಬ್ಯಾಗ್ ಹಿಡಿದು ಬರ್ತಾರೆ. ಹಾಗಾಗಿ ಸ್ಕೂಲ್ ಟೀಚರ್ ನಂತೆ  ಕಾಣ್ತಾರೆ. ಪಾರ್ಟಿ ಅಥವಾ ಸಮಾರಂಭಗಳಿಗೆ ಹೋಗುವಾಗ ಸೀರೆ ಜೊತೆ ಚಿಕ್ಕದಾದ ಬ್ಯಾಗ್ ಅಥವಾ ಸಣ್ಣ ಪರ್ಸ್ ತೆಗೆದುಕೊಂಡು ಹೋಗಿ.

ಈ ಮೂರು ರಾಶಿಯವರಿಗೆ ಸರ್ಕಾರಿ ಉದ್ಯೋಗ ಸುಲಭವಾಗಿ ಸಿಗುತ್ತದೆಯಂತೆ…!

ಸೀರೆ ಪಾದಕ್ಕಿಂತ ಕೆಳಗೆ ಬರೋದ್ರಿಂದ ಚಪ್ಪಲಿ ಕಾಣೋದಿಲ್ಲ ಎನ್ನುವ ಕಾರಣಕ್ಕೆ ಅನೇಕ ಮಹಿಳೆಯರು ಹಳೆಯ ಚಪ್ಪಲಿ ಧರಿಸುವುದುಂಟು. ಸೀರೆ ಉಟ್ಟ ಮೇಲೆ ಸರಾಗವಾಗಿ, ಆರಾಮಾಗಿ ಓಡಾಡಲು ಬರಬೇಕು. ಹಾಗಾಗಿ ನಿಮಗೆ ಯಾವುದೇ ಕಿರಿಕಿರಿ ಎನಿಸದ, ಸೀರೆಗೆ ಸರಿ ಹೊಂದುವ ಚಪ್ಪಲಿ ಧರಿಸಿ.

ಸೀರೆ ಒಳಗೆ ಹಾಕುವ ಒಳ ಲಂಗ ಕೂಡ ಇಲ್ಲಿ ಮಹತ್ವ ಪಡೆಯುತ್ತದೆ. ಸೀರೆ ಬಣ್ಣದ ಒಳ ಲಂಗವನ್ನು ಧರಿಸಬೇಕು. ಬೇರೆ ಬಣ್ಣದ ಲಂಗ ಧರಿಸಿದ್ರೆ ಮುಜುಗರಕ್ಕೊಳಗಾಗುವ ಪರಿಸ್ಥಿತಿ ಎದುರಾಗಬಹುದು.

ಬ್ರಾ ಬಗ್ಗೆ ಗಮನವಿರಬೇಕು. ಬ್ಲೌಸ್ ನಿಂದ ಹೊರಗೆ ಬರುವ ಬ್ರಾ ಅಸಹ್ಯವೆನಿಸುತ್ತದೆ. ಬ್ಲೌಸ್ ನಲ್ಲಿರುವ ಸೇಫ್ಟಿ ಹೋಲ್ಡರ್ ಜೊತೆ ಬ್ರಾವನ್ನು ಲಾಕ್ ಮಾಡಿ. ಇಲ್ಲವಾದ್ರೆ ಪಿನ್ ಸಹಾಯದಿಂದಲೂ ಬ್ರಾ ಹೊರಗೆ ಬರದಂತೆ ನೋಡಿಕೊಳ್ಳಿ.

 

Lovelydunia Admin

Recent Posts

ಆಯುರ್ವೇದದ ಪ್ರಕಾರ ಯಾವ ಸಮಯದಲ್ಲಿ ಸೆಕ್ಸ್ ಮಾಡಬಾರದು ಎಂಬುದನ್ನು ತಿಳಿಯಿರಿ….!

ಆಯುರ್ವೇದವನ್ನು ಹಳೆಯ ಆರೋಗ್ಯ ವಿಜ್ಞಾನವೆಂದು ಪರಿಗಣಿಸಲಾಗಿದೆ. ಈಗ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಇದನ್ನು ನಂಬುವವರು ಹೆಚ್ಚಾಗುತ್ತಿದ್ದಾರೆ. ಲೈಂಗಿಕತೆಯು ಜೀವನದ ಪ್ರಮುಖ…

3 weeks ago

ನಿಮ್ಮ ಸಂಗಾತಿಗೆ ಈ ವಿಷಯ ಹೇಳಿದರೆ ನಿಮ್ಮ ಸಂಬಂಧ ಮುರಿಯಬಹುದು…!

ಯಾವುದೇ ಸಂಬಂಧವು ನಡೆಯಲು ಪರಸ್ಪರ ತಿಳವಳಿಕೆ ಬಹಳ ಮುಖ್ಯ. ಕೆಲವೊಮ್ಮೆ ಸಣ್ಣ ವಿಚಾರಗಳಿಗೆ ಸಂಬಂಧ ಮುರಿಯುತ್ತದೆ. ಸಂಬಂಧದಲ್ಲಿ ಜಗಳ ಬರುವುದು…

3 weeks ago

ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ರಾತ್ರಿಯ ವೇಳೆ ಈ ಜ್ಯೂಸ್ ಕುಡಿಯಿರಿ…!

ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನಶೈಲಿಯಿಂದ ಅನೇಕ ಜನರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಂತೆ, ಆತಂಕದಿಂದ ಕೆಲವರು ರಾತ್ರಿ ಸರಿಯಾಗಿ ನಿದ್ರೆ…

3 weeks ago

ಜನನ ನಿಯಂತ್ರಣ ಮಾತ್ರೆ ಮತ್ತು ಕಾಪರ್ ಟಿ ಯಲ್ಲಿ ಯಾವುದು ಉತ್ತಮ ಎಂಬುದು ತಿಳಿಬೇಕಾ…?

ಇಂದಿನ ಸಮಯದಲ್ಲಿ ಮಹಿಳೆಯರು ತಮ್ಮ ಅನಗತ್ಯ ಗರ್ಭಧಾರಣೆಯನ್ನು ತಪ್ಪಿಸಲು ವಿವಿಧ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು. ಮಾತ್ರೆಗಳು, ಕಾಪರ್ ಟೀ, ಚುಚ್ಚುಮದ್ದು ಹಲವು…

3 weeks ago

ಚಿಕ್ಕ ಮಕ್ಕಳ ಹಸಿವನ್ನು ಹೆಚ್ಚಿಸಲು ಇವುಗಳನ್ನು ತಿನ್ನಲು ನೀಡಿ…!

ಚಿಕ್ಕಮಕ್ಕಳು ತಿನ್ನಲು ಇಷ್ಟಪಡುವುದಿಲ್ಲ. ಅವರಿಗೆ ಹಸಿವಾಗದಿರುವುದೇ ಇದಕ್ಕೆ ಕಾರಣ. ಅವರು ಸರಿಯಾಗಿ ಆಹಾರ ಸೇವಿಸದಿದ್ದರೆ ಅವರಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾಗಿ…

3 weeks ago

ಚಳಿಗಾಲದಲ್ಲಿ ಸೇವಿಸಿದ ಈ ಪದಾರ್ಥಗಳನ್ನು ಬೇಸಿಗೆಯಲ್ಲಿ ಸೇವಿಸಿದರೆ ಅಪಾಯ ಕಾಡಬಹುದು ಎಚ್ಚರ…!

ಹವಾಮಾನ ಬದಲಾದಂತೆ ನಮ್ಮ ದಿನಚರಿಗಳನ್ನು ಬದಲಿಸುವುದು ಅವಶ್ಯಕ. ಇದರಲ್ಲಿ ಆಹಾರ ಕ್ರಮ ಕೂಡ ಒಂದು. ಹಾಗಾಗಿ ಈಗಾಗಲೇ ಚಳಿಗಾಲ ಮುಗಿದು…

3 weeks ago